ವಲಸೆ ಹೋಗುತ್ತಿದ್ದ 90 ಕುರಿಗಳು ಕಾಲುವೆಗೆ ಬಿದ್ದು ಸಾವು…

kuri
Published on

ಬಳ್ಳಾರಿ: ಈ ಕುರಿಗಾಹಿಗಳು ಒಳ್ಳೆಯ ಮೇವು ಅರಸಿಕೊಂಡು ತಮ್ಮ 90 ಕುರಿಗಳ ಜೊತೆಗೆ ವಲಸೆ ಹೋಗುತ್ತಿದ್ದರು. ಆದರೆ ಮಾರ್ಗ ಮಧ್ಯೆ ನಡೆಯಬಾರದ್ದು ನಡೆದು ಹೋಗಿದೆ.

ಬಳ್ಳಾರಿ ಜಿಲ್ಲೆ ಸಿರುಗುಪ್ಪ‌ ತಾಲೂಕಿನ ನೆಹರೂ ನಗರ ಕ್ಯಾಂಪ್ ಬಳಿಯ ಕಾಲುವೆಯಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ‌ ವಲಸೆ ಕುರಿಗಾಹಿಗಳು, ಮೇವು ಹರಸಿಕೊಂಡು ಸಿರುಗುಪ್ಪ ತಾಲೂಕಿಗೆ ಬಂದಿದ್ದಾರೆ. ಕಾಲುವೆ ದಾಟುವ ವೇಳೆ ಒಂದರ ಮೇಲೊಂದು ಬಿದ್ದ ಕುರಿಗಳು ಮೃತಪಟ್ಟಿವೆ. ಈ ಸಂದರ್ಭ ಕಾಲುವೆಗೆ ಬಿದ್ದು 90ಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿವೆ.

ಕುರಿಗಾಹಿ ಸಿದ್ದಪ್ಪ ಎಂಬುವರಿಗೆ 19 ಕುರಿಗಳು, ಮಂಜುನಾಥ್ 26,ಮಂಜುನಾಥ್ ಸತ್ಯಪ್ಪ ಎಂಬುವರ 53 ಕುರಿಗಳು ಸೇರಿದ್ದವು. ಘಟನಾ ಸ್ಥಳಕ್ಕೆ ಸಿರುಗುಪ್ಪ ತಹಶಿಲ್ದಾರ್ ಮಂಜುನಾಥ್ ಸ್ವಾಮಿ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಗಂಗಾಧರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಕುರಿಗಾಹಿಗಳು ಕುರಿ ಕಳೆದುಕೊಂಡ ನೋವಿನಿಂದಾಗಿ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net