ಲಕ್ಷಣತೀರ್ಥ ವಿದ್ಯಾಸಂಸ್ಥೆಗೆ ಶೇ.90ರಷ್ಟು ಫಲಿತಾಂಶ

IMG-20250505-WA0093
Published on

ಹನಗೋಡು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹನಗೋಡಿನ ಲಕ್ಷಣತೀರ್ಥ ವಿದ್ಯಾಸಂಸ್ಥೆಯ ಶಾಲೆಗೆ ಶೇ.90ರಷ್ಟು ಫಲಿತಾಂಶ ಲಭಿಸಿದೆ. ಪರೀಕ್ಷೆ ಬರೆದ ಒಟ್ಟು 33 ವಿದ್ಯಾರ್ಥಿಗಳ ಪೈಕಿ 29 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಈ ಪೈಕಿ 13 ಮಂದಿ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 11 ಮಂದಿ ವಿದ್ಯಾರ್ಥಿಗಳು ಪ್ರಥಮ ದರ್ಜೆ, ಇನ್ನುಳಿದ ಎಲ್ಲ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಸಿ.ಎಲ್.ಸಿಂಚನಾ 590 ಅಂಕಗಳನ್ನು ಪಡೆದು ಹನಗೋಡು ಹೋಬಳಿಗೆ ಟಾಪರ್ ಆಗಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ನಟರಾಜ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net