ನೀರು ಶುದ್ಧವಾಗಿದ್ದಲ್ಲಿ ಶೇ.90ರಷ್ಟು ರೋಗ ತಡೆ ಸಾಧ್ಯ

08kkr4(1-25 ro plant icl nandipur
ಕಿಕ್ಕೇರಿ ಸಮೀಪದ ನಂದೀಪುರ ಗ್ರಾಮದಲ್ಲಿ ಕೋರಮಂಡಲ್ ಸಕ್ಕರೆ ಕಾರ್ಖಾನೆ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ರವಿರೆಡ್ಡಿ ಉದ್ಘಾಟಿಸಿದರು. ಕೆ. ಬಾಬುರಾಜ್, ನವೀನ್, ಸುಜಾತಾನಾಗರಾಜ್, ಸುವರ್ಣಾ, ಬಿ.ಟಿ. ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Published on

ಕಿಕ್ಕೇರಿ : ಆರೋಗ್ಯಕ್ಕೆ ಅವಶ್ಯವಾದ ನೀರು ಶುದ್ಧವಾಗಿದ್ದಲ್ಲಿ ಶೇ. 90ರಷ್ಟು ರೋಗಗಳನ್ನು ತಡೆಯಬಹುದಾಗಿದೆ ಎಂದು ಕೋರಮಂಡಲ್ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ರವಿರೆಡ್ಡಿ ತಿಳಿಸಿದರು.

ಸಮೀಪದ ನಂದೀಪುರ ಗ್ರಾಮದಲ್ಲಿ ಕೋರಮಂಡಲ್ ಸಕ್ಕರೆ ಕಾರ್ಖಾನೆ ವತಿಯಿಂದ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಕಾರ್ಖಾನೆಯು ಸಾಮಾಜಿಕ ಕಾರ್ಯ ಚಟುವಟಿಕೆ ಅಡಿಯಲ್ಲಿ 5ಲಕ್ಷ ರೂ. ವೆಚ್ಚದಲ್ಲಿ ಗ್ರಾಮೀಣ ಜನರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ರೈತರು, ಸುತ್ತಮುತ್ತಲ ಗ್ರಾಮದ ಜನತೆಗೆ ಮೂಲ ಸೌಲಭ್ಯ, ರೈತಾಪಿ ಮಕ್ಕಳಿಗೆ ವಿದ್ಯಾರ್ಥಿವೇತನ, ಶಾಲೆಗಳಿಗೆ ಪಠ್ಯ, ಪೀಠೋಪಕರಣದಂತಹ ಹಲವು ಸೌಲಭ್ಯ ನೀಡಲು ಮುಂದಾಗಿದೆ. ರೈತಸ್ನೇಹಿಯಾಗಿ ಕಾರ್ಖಾನೆ ಸದಾ ಕಾರ್ಯನಿರ್ವಹಿಸಲಿದೆ ಎಂದರು.

ರೈತರು ಹಾಗೂ ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗೆ ಎಂದಿನಂತೆ ಕಬ್ಬನ್ನು ಸರಬರಾಜು ಮಾಡಿ ಸಹಕರಿಸಬೇಕು. ಪರಿಸರ ಸ್ನೇಹಿಯಾಗಿ, ರೈತರ ಬಂಧುವಿನಂತೆ ಕೆಲಸ ಮಾಡುತ್ತಿರುವ ಕಾರ್ಖಾನೆ ವಿರುದ್ಧ ಕೆಲವು ವ್ಯಕ್ತಿಗಳು ನಡೆಸುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.

ಕಾರ್ಖಾನೆ ಕಬ್ಬು ವಿಭಾಗದ ಹಿರಿಯ ಅಧಿಕಾರಿ ಕೆ. ಬಾಬುರಾಜ್, ಎಜಿಎಂ ನವೀನ್, ಅಧಿಕಾರಿಗಳಾದ ವಿ.ಎಸ್. ಮೇಯನ್, ಅಶೋಕ್ ಕುಮಾರ್, ವೀರೇಶ್, ಬೀರವಳ್ಳಿ ಗ್ರಾಪಂ. ಅಧ್ಯಕ್ಷೆ ಸುಜಾತಾ ನಾಗರಾಜ್, ಪಿಡಿಒ ಸುವರ್ಣಾ, ಬಿ.ಟಿ. ಕುಮಾರ್, ಲತಾ ಮಂಜುನಾಥ್, ಬಿ.ಎಸ್. ಕುಮಾರ್, ಲಕ್ಷ್ಮೇಗೌಡ, ತಿಮ್ಮೇಗೌಡ, ಜಯಾನಂದ, ನಿರಂಜನ, ಕಬ್ಬು ಅಭಿವೃದ್ಧಿ ವಿಭಾಗದ ಅಧಿಕಾರಿಗಳು ಹಾಗೂ ಕ್ಷೇತ್ರ ಪ್ರಚಾರಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net