ಅಂಭ್ರಿಣೀ ಸಂಘಕ್ಕೆ 90 ಲಕ್ಷ ರೂ. ನಿವ್ವಳ ಆದಾಯ

19sgr4
ಸಾಗರದಲ್ಲಿ ಅಂಭ್ರಿಣೀ ವಿದ್ಯೇಶ ಸಹಕಾರಿ ಸಂಸ್ಥೆಯ ಗ್ರಾಹಕರ ಸಮಾಲೋಚನಾ ಸಭೆಯನ್ನು ಶಿವಾನಂದ ಯು. ಭಂಡಾರ್ಕರ್ ಉದ್ಘಾಟಿಸಿದರು. ಟಿ.ವಿ.ಪಾಂಡುರಂಗ, ಬಿ.ವಿ.ರವೀಂದ್ರನಾಥ್, ಉಮಾ ಎಸ್. ಭಂಡಾರ್ಕರ್, ಶಿವಪ್ರಕಾಶ್ ಇತರರಿದ್ದರು.
Published on

ಸಾಗರ: ಜನರ ಸಹಕಾರವೇ ಸಂಸ್ಥೆಯ ಜೀವಾಳ. ಷೇರುದಾರ ಮತ್ತು ಸಹಕಾರಿ ನಡುವೆ ಉತ್ತಮ ಸಂಬಂಧ ಇದ್ದರೇ ಸಂಸ್ಥೆ ಬೆಳವಣಿಗೆ ಅತ್ಯುನ್ನತವಾಗಿರುತ್ತದೆ ಎಂದು ಅಂಭ್ರಿಣೀ ವಿದ್ಯೇಶ ಸೌಹಾರ್ದ ಸಂಸ್ಥೆ ಅಧ್ಯಕ್ಷ ಶಿವಾನಂದ ಯು.ಭಂಡಾರ್ಕರ್ ಅಭಿಪ್ರಾಯಪಟ್ಟರು.

ನಗರದ ಕಾರಂತ ಸಭಾಭವನದಲ್ಲಿ ಶನಿವಾರ ಅಂಭ್ರಿಣೀ ವಿದ್ಯೇಶ ಸಹಕಾರಿ ಸಂಸ್ಥೆ ಏರ್ಪಡಿಸಿದ್ದ 19ನೇ ವರ್ಷದ ಗ್ರಾಹಕರ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಷೇರುದಾರರು ಸಂಸ್ಥೆಯ ಕಣ್ಣುಗಳಿದ್ದಂತೆ. ಸಂಸ್ಥೆಯ ಆಡಳಿತ ಮಂಡಳಿ ಕಣ್ಣನ್ನು ಸಂರಕ್ಷಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರಬೇಕು. 6 ಸಾವಿರ ಷೇರುದಾರರಿಗೆ ಸಾಲ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಿದ್ದು, ಈವರೆಗೆ 11 ಕೋಟಿ ರೂ. ಸಾಲ ವಿತರಿಸಲಾಗಿದೆ. ಈ ಆರ್ಥಿಕ ಸಾಲಿನಲ್ಲಿ ಸಂಸ್ಥೆ 90 ಲಕ್ಷ ರೂ. ನಿವ್ವಳ ಆದಾಯ ಗಳಿಸಿದೆ. ಷೇರುದಾರರಿಗೆ ಶೇ.9 ಡಿವಿಡೆಂಡ್ ನೀಡುವ ಉದ್ದೇಶ ಹೊಂದಲಾಗಿದೆ. ಕಳೆದ 19 ವರ್ಷಗಳಿಂದಲೂ ಸಂಸ್ಥೆ ಡಿವಿಡೆಂಡ್ ನೀಡುತ್ತ ಬಂದಿದೆ ಎಂದರು.
ಉಪಾಧ್ಯಕ್ಷ ಟಿ.ವಿ.ಪಾಂಡುರಂಗ ಮಾತನಾಡಿ, ಗ್ರಾಹಕರ ನಿರಂತರ ಸಹಕಾರ ಇದ್ದಾಗ ಮಾತ್ರ ಸಂಸ್ಥೆಯನ್ನು ಉತ್ತಮವಾಗಿ ಬೆಳೆಸಲು ಸಾಧ್ಯವಾಗುತ್ತದೆ. ಸಹಕಾರಿ ಸಂಸ್ಥೆಯನ್ನು ಸ್ಥಾಪಿಸುವುದು ಸುಲಭ. ಆದರೆ ಅದನ್ನು ನಿರಂತರವಾಗಿ ನಷ್ಟವಿಲ್ಲದಂತೆ ನಡೆಸಿಕೊಂಡು ಹೋಗುವುದು ಕಷ್ಟಸಾಧ್ಯ. ಆದರೆ ಅಂಭ್ರಿಣಿ ವಿದ್ಯೇಶ ಸಹಕಾರಿ 19 ವರ್ಷಗಳಿಂದಲೂ ಡಿವಿಡೆಂಡ್ ನೀಡುವ ಮೂಲಕ ಲಾಭದಾಯಕ ಸ್ಥಿತಿಯಲ್ಲಿ ಮುನ್ನಡೆಯುತ್ತಿರುವುದಕ್ಕೆ ಷೇರುದಾರ ಸದಸ್ಯರ ಸಹಕಾರವೇ ಕಾರಣ ಎಂದರು.
ಆಂತರಿಕ ಲೆಕ್ಕ ಪರಿಶೋಧಕ ಬಿ.ವಿ.ರವೀಂದ್ರನಾಥ್, ಉಮಾ ಎಸ್.ಭಂಡಾರ್ಕರ್, ಶಿವಪ್ರಕಾಶ್, ಜಿ.ಆರ್.ವಿಜಯಲಕ್ಷ್ಮೀ, ಎಸ್.ಡಿ.ಸುಮಾ, ಕೆ.ಶ್ಯಾಮಸುಂದರ್, ಎಸ್.ಬಿ.ಕಾರ್ತಿಕ್, ಎಚ್.ಎಸ್.ರಶ್ಮಿ , ಎಸ್.ಪಿ.ಪ್ರಿಯಾಂಕಾ, ಕೆ.ಎಸ್.ಕೃಷ್ಣಮೂರ್ತಿ, ಜಿ.ಆರ್.ರಾಘವೇಂದ್ರ, ಸಿಇಒ ಕೆ.ಎಚ್.ಸುಧೀಂದ್ರ, ಡಾ. ಪದ್ಮಜಾ ಶೆಣೈ, ವಿ.ಟಿ.ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net