ಚಿತ್ರದುರ್ಗ: ನಗರಕ್ಕೆ ಪೂರೈಕೆಯಾಗುವ ಶಾಂತಿಸಾಗರದ ನೀರು ಸರಬರಾಜು ಯೋಜನೆಯ ಜಾಕ್‌ವೆಲ್ ವಿದ್ಯುತ್ ಸ್ಥಾವರದಲ್ಲಿ ಬ್ರೇಕರ್ ಅಳವಡಿ ಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಫೆ.9 ರಿಂದ ಎರಡು ದಿನಗಳ ಕಾಲ ಶಾಂತಿಸಾಗರದಿಂದ ನೀರು ಸರಬರಾಜು ತಾತ್ಕಾಲಿಕವಾಗಿ ಸ್ಥಗಿತಗೊಳಿಸ ಲಾಗುತ್ತಿದೆ ಎಂದು ನಗರಸಭೆ ಪೌರಾಯುಕ್ತೆ ಎಂ. ರೇಣುಕಾ ತಿಳಿಸಿದ್ದಾರೆ.