9 ಮತಗಳಿಂದ ಸಯ್ಯದ್ ಅಮ್ಮಣಗಿ ಗೆಲುವು

22..6
ಸಾರಾಪುರ ಗ್ರಾಪಂಗೆ ಆಯ್ಕೆಯಾದ ಅಧ್ಯಕ್ಷ ಸಯ್ಯದ್ ಅಮ್ಮಣಗಿ, ಉಪಾಧ್ಯಕ್ಷೆ ವೀಣಾ ಹುಂಜಿ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು.
Published on

ಹುಕ್ಕೇರಿ: ತಾಲೂಕಿನ ಸಾರಾಪುರ ಗ್ರಾಪಂಗೆ ಗುರುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಸಯ್ಯದ್ ಅಮ್ಮಣಗಿ, ಉಪಾಧ್ಯಕ್ಷೆಯಾಗಿ ವೀಣಾ ಹುಂಜಿ ಆಯ್ಕೆಯಾಗಿದ್ದಾರೆ.


ಚುನಾವಣೆಯಲ್ಲಿ ಗ್ರಾಪಂ ವ್ಯಾಪ್ತಿಯ 4ನೇ ವಾರ್ಡ್‌ನ ಶಿರಹಟ್ಟಿ ಬಿ.ಕೆ ಗ್ರಾಮದ ಸದಸ್ಯ ಸಯ್ಯದ್ ಅಮ್ಮಣಗಿ 9 ಮತಗಳನ್ನು ಪಡೆದು ಗೆಲುವು ಸಾಸಿದರು. ಪ್ರತಿಸ್ಪರ‌್ ಸಾರಾಪುರ ಗ್ರಾಮದ 1ನೇ ವಾರ್ಡನ್ ರಮೇಶ ಪೂಜೇರಿ 8 ಮತಗಳನ್ನು ಪಡೆದು ಪರಾಭವಗೊಂಡರು. ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ವೀಣಾ ದುಂಡಪ್ಪ ಹುಂಜಿ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಕಾರಿಗಳು ಘೋಷಿಸಿದರು.


ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿತ್ತು. ಸಾರಾಪುರ, ಶಿರಹಟ್ಟಿ ಬಿ.ಕೆ., ಶಿರಹಟ್ಟಿ ಕೆ.ಡಿ ಗ್ರಾಮಗಳನ್ನು ಒಳಗೊಂಡಿರುವ ಸಾರಾಪುರ ಗ್ರಾಪಂ ಒಟ್ಟು 17 ಸದಸ್ಯರ ಬಲ ಹೊಂದಿದೆ. ಚುನಾವಣಾಕಾರಿಯಾಗಿ ಪ್ರಧಾನಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆ(ಬಿಸಿಯೂಟ)ಯ ಸಹಾಯಕ ನಿರ್ದೇಶಕಿ ಸವಿತಾ ಹಲಕಿ, ಸಹಾಯಕ ಚುನಾವಣಾಕಾರಿಯಾಗಿ ಪಿಡಿಒ ಸಂತೋಷ ಕಬ್ಬಗೋಳ ಕರ್ತವ್ಯ ನಿರ್ವಹಿಸಿದರು.


ಶಾಸಕ ನಿಖಿಲ ಕತ್ತಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರ ಮಾರ್ಗದರ್ಶನದಲ್ಲಿ ಮುಖಂಡರಾದ ರಾಮಣ್ಣ ಗೋಟೂರೆ, ಅಣಪ್ಪ ಬ್ಯಾಳಿ, ದಾದಾ ದಪ್ಪಾದೂಳಿ, ಸತ್ಯಪ್ಪ ಹಾಲಟ್ಟಿ, ಯಲ್ಲಪ್ಪ ಡಪರಿ, ಶಿವಾನಂದ ಢಂಗ, ಮಂಜು ಪಡದಾರ, ಅಲಿಸಾಬ್ ಅಮ್ಮಣಗಿ, ಬಸವರಾಜ ಹಾಲಟ್ಟಿ ನೇತತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net