

ಕುಶಾಲನಗರ:
ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಯ ಗೊಂದಿಬಸವನಹಳ್ಳಿ ಗ್ರಾಮದ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಗೋವಿಂದಪ್ಪ ಅವರ ಅಧ್ಯಕ್ಷತೆಯಲ್ಲಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಗುರುವಾರ ಗ್ರಾಮಸಭೆ ನಡೆಯಿತು.
ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ವಾಸವಿರುವ ನಿವಾಸಿಗಳು ತಮ್ಮ ಜಾಗಗಳಿಗೆ ಖಾತೆ ಪಡೆದುಕೊಳ್ಳುವ ಸಂಬಂಧ ಸಲ್ಲಿಸಿದ ಅರ್ಜಿಗಳ ಬಗ್ಗೆ ಚರ್ಚೆ ನಡೆಯಿತು. ಸರ್ಕಾರದ ಸೂಚನೆಯಂತೆ ವಿಭಾಗೀಯ ಮಟ್ಟಕ್ಕೆ ಸಲ್ಲಿಸಿದ 158 ಅರ್ಜಿದಾರರ ಪೈಕಿ ಸೂಕ್ತ ದಾಖಲಾತಿಗಳನ್ನು ಸಲ್ಲಿಸಿದ 9 ಮಂದಿ ಪ.ಪಂಗಡದವರಿಗೆ ಹಕ್ಕು ಪತ್ರ ಮಂಜೂರಾಗಿರುವ ಬಗ್ಗೆ ಸಮಿತಿ ಕಾರ್ಯದರ್ಶಿ ಗ್ರಾಪಂ ಪಿಡಿಒ ಸುಮೇಶ್ ಮಾಹಿತಿ ನೀಡಿದರು.
ಗ್ರಾಪಂ ಅಧ್ಯಕ್ಷ ಬಿ.ಕೆ.ಚೆಲುವರಾಜು ಮಾತನಾಡಿ, ಗ್ರಾಪಂ ಮೂಲಕ ಗ್ರಾಮಕ್ಕೆ ಬೇಕಾದ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಹಕ್ಕುಪತ್ರ ಒದಗಿಸುವಲ್ಲಿ ಕೂಡ ಗ್ರಾಪಂ ಆಡಳಿತ ಮತ್ತು ಅಧಿಕಾರಿ ವರ್ಗ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಶೀಘ್ರದಲ್ಲೇ ಗ್ರಾಮಸ್ಥರ ಬೇಡಿಕೆ ಈಡೇರಲಿದೆ ಎಂದು ತಿಳಿಸಿದರು.
ಗ್ರಾಪಂ ಸದಸ್ಯರಾದ ಜಿ.ಬಿ.ಜಗದೀಶ್, ಕಾಂಚನಾ, ಮಲ್ಲಿಗೆ, ಮುರಳಿ, ಆಸಿಫ್, ಮಣಿ, ಕಾರ್ಯದರ್ಶಿ ಮಂಜುನಾಥ್, ಅರಣ್ಯ ಹಕ್ಕು ಸಮಿತಿ ಸದಸ್ಯರಾದ ಜಯಶಂಕರ್, ಮೀನಾ, ನಾಗರಾಜು, ಗ್ರಾಪಂ ಮಾಜಿ ಸದಸ್ಯ ಎಂ.ಎಂ.ಪ್ರಕಾಶ್ ಇದ್ದರು.