9 ದ್ವಿಚಕ್ರ ವಾಹನ ಜಪ್ತಿ

2603 KLB 04
Published on

ಕಲಬುರಗಿ: ನಗರದ ವಿವಿಧೆಡೆ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದ ಕಳ್ಳರಿಬ್ಬರನ್ನು ಬಂಧಿಸಿರುವ ಪೊಲೀಸರು, ಬಂಧಿತರಿಂದ ಒಂಬತ್ತು ಬೈಕ್‌ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ನಗರದ ಅಂಬೇಡ್ಕರ್ ಆಶ್ರಯ ಕಾಲನಿಯ ಗುಂಡಪ್ಪ ಎಸ್. ಮತ್ತು ಬುಲಂಧ ಫರ್ವೇಜ ಕಾಲನಿಯ ಮದಾರ್ ಅಲಿ ಬಂಧಿತರು.
ಮಾ.25ರಂದು ನಗರದ ಶಾಸ್ತಿ ನಗರದಲ್ಲಿನ ಅನೀಲಗೌಡ ಪಾಟೀಲ್ ಅವರ ಬೈಕ್ ಕಳ್ಳತನವಾಗಿರುವ ಕುರಿತು ರೋಜಾ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಪ್ರಕರಣದ ಬೆನ್ನಟ್ಟಿದ್ದ ಪೊಲೀಸರು ಪ್ರಕರಣ ದಾಖಲಾದ ೨೪ ಗಂಟೆಯಲ್ಲಿಯೇ ಆರೋಪಿಗಳನ್ನು ಬಂಧಿಸಿ, ಅವರಿಂದ ೩.೨೫ ಲಕ್ಷ ರೂ. ಮೌಲ್ಯದ ಒಂಬತ್ತು ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.

ಎಸಿಪಿ ಚಂದ್ರಶೇಖರ ಮಾರ್ಗದರ್ಶನದಲ್ಲಿ ಪಿಐ ಅನೀಸ್ ಅಹ್ಮದ್ ಮುಜಾವರ್, ಸಿಬ್ಬಂದಿ ರಫಿಯೋದ್ದಿನ್, ಹಮೀದೊದ್ದಿನ್, ಕಾಶಿನಾಥ, ದೇವರಾಜ, ನಾಸಿರ್ ಅವರ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಪತ್ತೆ ಹಚ್ಚಿ, ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net