ಎಸ್.ಕೆ ಬಾರ್ಡರ್‌ನಲ್ಲಿ ಕ್ರೂಸರ್-ಟಿಪ್ಪರ್ ಮಧ್ಯೆ ಡಿಕ್ಕಿಯಾಗಿ 9 ಮಂದಿ ಗಾಯ

chutuku copy copy
Published on

ಕಾರ್ಕಳ: ಮಾಳ ಎಸ್.ಕೆ ಬಾರ್ಡರ್‌ನ ಓಟೆಹಳ್ಳಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ರೂಸರ್ ವಾಹನ ಹಾಗೂ ಟಿಪ್ಪರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಕ್ರೂಸರ್‌ನಲ್ಲಿದ್ದ 9 ಮಂದಿ ಗಾಯಗೊಂಡಿದ್ದಾರೆ.
ಶೃಂಗೇರಿಯಿಂದ ಮಾಳ ಕಡೆ ಬರುತ್ತಿದ್ದ ಕ್ರೂಸರ್ ಹಾಗೂ ಮಾಳ ಕಡೆಯಿಂದ ಶೃಂಗೇರಿಗೆ ಹೋಗುತ್ತಿದ್ದ ಟಿಪ್ಪರ್ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಕ್ರೂಸರ್ ಚಾಲಕ ಶ್ರೀಕಾಂತ್ ಹಾಗೂ ಅದರಲ್ಲಿ ಪ್ರಯಾಣಿಸುತ್ತಿದ್ದ ಮೂವರು ಹೆಂಗಸರು, ಮೂವರು ಮಕ್ಕಳು ಹಾಗೂ ಇಬ್ಬರು ಪುರುಷರು ಗಾಯಗೊಂಡಿದ್ದಾರೆ.
ಅಪಘಾತದ ತೀವ್ರತೆಗೆ ಎರಡು ವಾಹನಗಳು ಜಖಂಗೊಂಡಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net