

ಯಲ್ಲಾಪುರ: ತರಕಾರಿ, ಹಣ್ಣು ತುಂಬಿದ ಲಾರಿ ಪಲ್ಟಿಯಾಗಿ 9 ಜನರು ಮೃತಪಟ್ಟ ಘಟನೆ ತಾಲೂಕಿನ ಅರಬೈಲ್ ಘಟ್ಟದಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.
ಮೃತರೆಲ್ಲರೂ ಹಾವೇರಿಯ ಸವಣೂರಿನವರೆಂದು ಹೇಳಲಾಗುತ್ತಿದೆ. ತರಕಾರಿ, ಹಣ್ಣು ತುಂಬಿಕೊಂಡು ಕುಮಟಾದ ಸಂತೆಗೆ ಹೋಗುವಾಗ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ 10 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.