ಜೂಜಾಡುತ್ತಿದ್ದ 9 ಜನರ ಬಂಧನ

GAMBLING
Published on

ನಂಜನಗೂಡು: ಜೂಜು ಅಡ್ಡೆಯ ಮೇಲೆ ಕವಲಂದೆ ಪೊಲೀಸರು ಭಾನುವಾರ ದಾಳಿ ನಡೆಸಿ 9 ಜನರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಲೂಕಿನ ಪಿ.ಮರಹಳ್ಳಿ ಗ್ರಾಮದ ನಿವಾಸಿಗಳಾದ ಮಹಾಲಿಂಗ, ಆನಂದ್, ರಾಜು, ಮಹೇಶ್, ಬಸವಣ್ಣ, ಮಹೇಶ್, ಸುಬ್ಬಣ್ಣ, ಚಂದ್ರಶೇಖರ್, ದೊಡ್ಡಮಾದಪ್ಪ ಬಂಧಿತರು. ಇವರು ದಾಸನೂರು ರಸ್ತೆಯಲ್ಲಿರುವ ನಾಗರಕಟ್ಟೆ ಹತ್ತಿರ ಕೆರೆ ಏರಿಯಲ್ಲಿ ಜೂಜಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕವಲಂದೆ ಠಾಣೆಯ ಪಿಎಸ್‌ಐ ಬಸವರಾಜು ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದರಲ್ಲದೆ, 9 ಜನರನ್ನು ಬಂಧಿಸಿ ಪಣಕಿಟ್ಟಿದ್ದ 5.300 ರೂ. ವನ್ನು ವಶಕ್ಕೆ ಪಡೆದಿದ್ದಾರೆ.

ಕಾರ್ಯಚರಣೆಯಲ್ಲಿ ಸಿಬ್ಬಂದಿ ಎಸ್.ಬಿ ರಮೇಶ್, ಚಂದ್ರು, ಚೆಲುವರಾಜು, ರವಿಕುಮಾರ್, ರಾಜಶೇಖರ್, ನಾಗೇಂದ್ರ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net