ಸಾಹಿತ್ಯ ಸಮ್ಮೇಳನದ ತ್ಯಾಜ್ಯ ತಿಂದು ಒಂಬತ್ತು ಕುರಿ ಮೃತ

18 HVR 2
Published on

ಹಾವೇರಿ: ಸಾಹಿತ್ಯ ಸಮ್ಮೇಳನದಲ್ಲಿ ಉಳಿದಿದ್ದ ಆಹಾರ ತ್ಯಾಜ್ಯ ತಿಂದು ಒಂಬತ್ತು ಕುರಿ ಮೃತಪಟ್ಟು, 15 ಕುರಿಗಳು ಅಸ್ವಸ್ಥಗೊಂಡ ಧಾರುಣ ಘಟನೆ ಜರುಗಿದೆ. ಕುರಿಗಳನ್ನು ಕಳೆದುಕೊಂಡ ಕುರಿಗಾಹಿ ಕುಟುಬ ಕಣ್ಣೀರು ಇಡುತ್ತಿದೆ.

ಜನವರಿ 6, 7, 8ರಂದು ಸಾಹಿತ್ಯ ಸಮ್ಮೇಳನ ಜರುಗಿತ್ತು.
ಸಮ್ಮೇಳನ ಮುಗಿದ ಬಳಿಕ ಸ್ಥಳದಲ್ಲಿ ಚಪಾತಿ, ಅನ್ನ, ಈರುಳ್ಳಿ, ಮತ್ತಿತರ ಆಹಾರ ತ್ಯಾಜ್ಯವನ್ನು ಎಸೆದು ಹೋಗಲಾಗಿದೆ.

ಚಿಕ್ಕೋಡಿ ಮೂಲದ ಲಕ್ಷ್ಮವ್ವ ನಿರಾಠಿ ಕುಟುಂಬದ ಕುರಿಗಾಹಿಗಳು ಮಗಳವಾರ ಕುರಿ ಮೇಯಿಸುವಾಗ 30ಕ್ಕೂ ಅಧಿಕ ಕುರಿಗಳು ತಪ್ಪಿಸಿಕೊಂಡು ಬಂದು ಸಮ್ಮೇಳನ ಸ್ಥಳದಲ್ಲಿದ್ದ ವಿಷಾಹಾರ ತಿಂದು ಮೃತಪಟ್ಟಿವೆ.

ಸ್ಥಳಕ್ಕೆ ಪಶು ಇಲಾಖೆ ಸಿಬ್ಬಂದಿ ಆಗಮಿಸಿ ಅಸ್ವಸ್ಥಗೊಂಡ ಕುರಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಆದರೆ ಸೂಕ್ತ ಪರಿಹಾರ ನೀಡುವಂತೆ ಕುರಿಗಾಹಿ ಕುಟುಂಬ ಆಗ್ರಹಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net