ಹುಚ್​ಕಾಯಿ ತಿಂದು 9 ಮಕ್ಕಳು ಅಸ್ವಸ್ಥ

7 bangarpete 2
Published on

ಬಂಗಾರಪೇಟೆ: ತಾಲೂಕಿನ ಪುತ್ರಸೊಣ್ಣೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹುಚ್​ಕಾಯಿ ತಿಂದು 9 ಮಕ್ಕಳು ಅಸ್ವಸ್ಥರಾಗಿದ್ದು, ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಸೋಮವಾರ ಮಧ್ಯಾಹ್ನ ಬಿಸಿಯೂಟ ಸೇವಿಸಿದ ನಂತರ ಕೆಲ ಮಕ್ಕಳು ಆಟವಾಡುತ್ತಾ ಆವರಣ ಪಕ್ಕದ ಬೇಲಿಯಲ್ಲಿ ಬೆಳೆದಿದ್ದ ಹುಚ್ಚಕಾಯಿಯನ್ನು ಹಣ್ಣು ಎಂದು ಭಾವಿಸಿ ತಿಂದಿದ್ದಾರೆ. ನಂತರ ತರಗತಿಯಲ್ಲಿ ಕುಳಿತಿದ್ದಾಗ 3 ಗಂಟೆ ಸುಮಾರಿಗೆ ಹುಚ್​ಕಾಯಿ ತಿಂದವರೆಲ್ಲರೂ ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡಿದ್ದಾರೆ.

ಶಿಕ್ಷಕಿ ಉಷಾರಾಣಿ ಮತ್ತು ಪಾಲಕರು ತಕ್ಷಣ ಮಕ್ಕಳನ್ನು ಆಟೋಗಳಲ್ಲಿ ಕರೆದುಕೊಂಡು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ಒಂದರಿಂದ ಮೂರನೇ ತರಗತಿಯ ಮಕ್ಕಳಾದ ಗೌತಮ್​ ನಂದ, ಎಂ.ಅಜಿತ್​ ಸಿಂಹ, ಗಾನಶ್ರೀ, ಅನನ್ಯಾ, ಬಾಲವರ್ಧನ್​ ವಂಶಿ, ಸಂಜನಾಶ್ರೀ, ರೋಹಿತ್​, ಗೌತಮಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸ್​ ಇನ್​ಸ್ಪೆಕ್ಟರ್​ ದಯಾನಂದ್​ ಅವರು ಮಕ್ಕಳ ಆರೋಗ್ಯ ವಿಚಾರಿಸಿ ಪ್ರತಿ ಮಗುವಿಗೂ ಆರ್ಥಿಕ ಸಹಕಾರ ನೀಡಿ ಧೈರ್ಯ ತುಂಬಿದರು.ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಹೆಲ್ತ್​ ರವಿ, ಶಿಕ್ಷಕರ ಸಂಘದ ಅಧ್ಯಕ್ಷ ಆಂಜನೇಗೌಡ, ಕಾರ್ಯದರ್ಶಿ ಸುಜಾತಮ್ಮ, ಶಿಕ್ಷಕರಾದ ರಮೇಶ್​, ಉಷಾರಾಣಿ ವರಲಕ್ಷಿ$್ಮ, ಮುನ್ನಾರಾಯಣ ಆಸ್ಪತ್ರೆಗೆ ಭೇಟಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net