ಸರಣಿ ಅಪಘಾತದಲ್ಲಿ 9 ಕಾರು ಜಖಂ

Untitled-3
ದೇವನಹಳ್ಳಿ ಸಮೀಪದ ಚಿಕ್ಕಸಣ್ಣೆ ಗೆಟ್​ ಬಳಿಯ ಸರಣಿ ಅಪಘಾತದಲ್ಲಿ ಕಾರುಗಳು ಜಖಂಗೊಂಡಿರುವುದು.
Published on

ದೇವನಹಳ್ಳಿ : ಪಟ್ಟಣದ ಹೊರವಲಯದ ಬೆಂಗಳೂರು ರಸ್ತೆಯ ಚಿಕ್ಕಸಣ್ಣೆ ಗೇಟ್​ ಬಳಿ ಸಿಗ್ನಲ್​ನಲ್ಲಿ ನಿಂತಿದ್ದ ಕಾರುಗಳಿಗೆ ಟಿಪ್ಪರ್​ ಹಿಂಬಂದಿಯಿಂದ ಡಿಕ್ಕಿಹೊಡೆದು ಹಲವು ವಾಹನಗಳು ಜಖಂಗೊಂಡಿವೆ.

ಬುಧವಾರ ಮಧ್ಯಾಹ್ನ 12.45ರ ಸುಮಾರಿಗೆ ಬೆಂಗಳೂರು ಕಡೆಯಿಂದ ಬರುತ್ತಿದ್ದ ವಾಹನಗಳು ಸಿಗ್ನಲ್​ನಿಂದಾಗಿ ಸಾಲುಗಟ್ಟಿ ನಿಂತಿದ್ದವು. ಈ ವೇಳೆ ವೇಗವಾಗಿ ಬಂದ ಟಿಪ್ಪರ್​ ಚಾಲಕನ ನಿಯಂತ್ರಣ ಕಳೆದುಕೊಂಡು ಕಾರುಗಳಿಗೆ ಡಿಕ್ಕಿಹೊಡೆದಿದ್ದು, ಕಾರುಗಳು ಒಂದರ ಹಿಂದೆ ಒಂದು ನಿಂತ ಪರಿಣಾಮ ಡಿಕ್ಕಿ ರಭಸಕ್ಕೆ 9 ಕಾರುಗಳು ಜಖಂಗೊಡಿವೆ. ಅವಡದಲ್ಲಿ ಎಲ್ಲ ವಾಹನ ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್​ ಪ್ರಾಣಾಪಾಯದಿಂದ ಎಲ್ಲರೂ ಪಾರಾಗಿದ್ದಾರೆ. ದೇವನಹಳ್ಳಿ ಸಂಚಾರ ವಿಭಾಗದ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿ ಚಾಲಕ ವಶಕ್ಕೆ: ಇನ್​ಸ್ಪೆಕ್ಟರ್​ ಜಿ.ಸಿ.ರಾವೇಂದ್ರ, ಪಿಎಸ್​ಐ ಕೆಸಿ.ಸಾವಿತ್ರಿ ಮತ್ತು ಸಿಬ್ಬಂದಿ ಸ್ಥಳ ಪರಿಶೀಲಿಸಿ ಲಾರಿ ಚಾಲಕನನ್ನು ಬಂಧಿಸಿ, ಲಾರಿಯನ್ನು ವಶಕ್ಕೆ ಪಡೆದರು. ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸಿರುವುದು ಅವಡಕ್ಕೆ ಕಾರಣ ಎನ್ನಲಾಗಿದೆ. ಲಾರಿ ಚಾಲಕನ ವಿರುದ್ಧ ಕಾರು ಚಾಲಕರು ದೂರು ದಾಖಲಿಸಿದ್ದಾರೆ. ಇನ್​ಸ್ಪೆಕ್ಟರ್​ ರಾವೇಂದ್ರ ಮಾತನಾಡಿ, ಬೆಂಗಳೂರು&ಹೈದರಾಬಾದ್​ ಹೆದ್ದಾರಿ ವಿಶಾಲವಾಗಿದ್ದರೂ ಆತುರದ ಚಾಲನೆಯಿಂದಾಗಿ ಸರಣಿ ಅಪಘಾತ ಸಂಭವಿಸಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸುವವರಿಗೆ ದಂಡ ವಿಧಿಸಲಾಗುತ್ತಿದೆ. ಜತೆಗೆ ಚಾಲಕರ ಚಾಲನಾ ಪರವಾನಗಿಯನ್ನು ರದ್ದುಪಡಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net