

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೇ ದಿನವಾದ ಮಂಗಳವಾರ 9 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಡಾ. ವಿ.ಬಿ. ರಾಜೂರ, ಹನುಮಾಕ್ಷಿ ಗೋಗಿ, ಪರಮೇಶ್ವರ ಶಂಕ್ರಪ್ಪ ಕಾಳೆ, ಕಾರ್ಯಾಧ್ಯಕ್ಷ ಸ್ಥಾನಕ್ಕೆ ಹನುಮಾಕ್ಷಿ ಗೋಗಿ, ಕೋಶಾಧ್ಯಕ್ಷ ಸ್ಥಾನಕ್ಕೆ ಸಂಜೀವ ಚಂದ್ರಕಾಂತ ಧುಮಕನಾಳ, ಕಾರ್ಯಕಾರಿ ಮಹಿಳಾ ಮೀಸಲು ಸ್ಥಾನಕ್ಕೆ ಸುವರ್ಣ ಸುರಕೋಡ, ಎಸ್ಸಿ, ಎಸ್ಟಿ ಮೀಸಲು ಸ್ಥಾನಕ್ಕೆ ಡಾ. ಅನಿಲ ಕೃಷ್ಣಾ ಮೇತ್ರಿ, ಪರಮೇಶ್ವರ ಶಂಕ್ರಪ್ಪ ಕಾಳೆ, ಸಾಮಾನ್ಯ ಸ್ಥಾನಕ್ಕೆ ಸಂತೋಷ ಗಜಾನನ ಮಹಾಲೆ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಸಿ.ಎಸ್. ನೇಗಿನಹಾಳ ತಿಳಿಸಿದ್ದಾರೆ.