9.99 ಲಕ್ಷ ಮೆ. ಟನ್ ಕಬ್ಬು ಅರೆದ ಚಿದಾನಂದ ಕೋರೆ ಕಾರ್ಖಾನೆ

23mjr2
Published on

ಮಾಂಜರಿ: ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಸಕ್ತ ಹಂಗಾಮಿನಲ್ಲಿ 9.99 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆದು, ಸಕ್ಕರೆ ಉತ್ಪಾದನೆ ಜತೆಗೆ ವಿದ್ಯುತ್ ಮತ್ತು ಎಥೆನಾಲ್ ಉತ್ಪಾದಿಸಿದೆ ಎಂದು ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಹೇಳಿದರು.

ಇಲ್ಲಿನ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಹಂಗಾಮ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಅವರು, ಕೆಎಲ್‌ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ರಾಷ್ಟ್ರೀಯ ಸಕ್ಕರೆ ಕಾರ್ಖಾನೆ ಮಹಾಮಂಡಳ ನವದೆಹಲಿ ನಿರ್ದೇಶಕ ಅಮಿತ್ ಕೋರೆ ಮಾರ್ಗದರ್ಶನದಲ್ಲಿ ಕಾರ್ಖಾನೆ ಕಬ್ಬು ಬೆಳೆಯುವ ರೈತರಿಗೆ ಹಾಗೂ ಸದಸ್ಯರಿಗೆ ಹಲವಾರು ಯೋಜನೆ ನೀಡಿದೆ. ರೈತರ ಜಮೀನಿಗೆ ನೀರಾವರಿ ಕಲ್ಪಿಸಿದೆ ಎಂದರು.

ಕಾರ್ಖಾನೆಗೆ ಪ್ರಸಕ್ತ ಸಾಲಿನಲ್ಲಿ ಹೆಚ್ಚು ಕಬ್ಬು ಪೂರೈಸಿದ ರೈತರಿಗೆ, ಹೆಚ್ಚು ಕಬ್ಬು ಸಾಗಣೆ ಮತ್ತು ಕಬ್ಬು ಕಟಾವು ಕಾರ್ಮಿಕರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಕಾರ್ಖಾನೆ ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ವ್ಯವಸ್ಥಾಪಕ ನಿರ್ದೇಶಕ ಆರ್.ಬಿ.ಖಂಡಗಾವಿ, ನಿರ್ದೇಶಕರಾದ ಭರತೇಶ ಬಣವಣೆ, ಅಜಿತರಾವ್ ದೇಸಾಯಿ, ಮಲ್ಲಪ್ಪ ವೈಶಾಳೆ, ಭೀಮಗೌಡ ಪಾಟೀಲ, ಮಹಾವೀರ ಕತ್ರಾಳೆ, ಅಣ್ಣಸಾಹೇಬ ಇಂಗಳೆ ಇತರರು ಇದ್ದರು. ವ್ಯವಸ್ಥಾಪಕ ನಿರ್ದೇಶಕ

ಎನ್.ಎಸ್.ಹಿರೇಮಠ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net