ಹೂಡಿಕೆ ಹೆಸರಿನಲ್ಲಿ 9.70 ಲಕ್ಷ ರೂ. ವಂಚನೆ

cybe crime
Published on

ಹುಬ್ಬಳ್ಳಿ: ಸ್ಮಾರ್ಟ್ ಮೈಂಡ್ಸ್ ಅಲೈಯನ್ಸ್ ಗ್ರೂಪ್ 62ರಲ್ಲಿ ಹೂಡಿಕೆ ಮಾಡಿದರೆ ಲಾಭ ಗಳಿಸಬಹುದೆಂದು ನಂಬಿಸಿದ ವಂಚಕರು, ನಗರದ ವ್ಯಕ್ತಿಯೊಬ್ಬರಿಂದ 9.70 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ನಗರದ ರಿಯಾಜ್ ಅಹ್ಮದ್ ಮುಲ್ಲಾ ವಂಚನೆಗೆ ಒಳಗಾದವರು. ಫೇಕ್ ಆ್ಯಪ್ ಬಲ್ಕ್ ಫಿಸ್ಡಂ ಪ್ಲಸ್ ಗ್ರೂಪ್‌ಗೆ ಸೇರಿಸಿದ ವಂಚಕರು,

ಮೊದಲು ಲಾಭಾಂಶ ಕೊಟ್ಟಿದ್ದಾರೆ. ನಂತರ ಹಂತ ಹಂತವಾಗಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಸಿಇಎನ್ ಕ್ರೈಂ ಠಾಣೆಗೆ ಕೊಟ್ಟ ದೂರಿನಲ್ಲಿ ವಿವರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net