9.41 ಕೋಟಿ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ ವಶ

BIRUR raid
ಬೀರೂರಿನಲ್ಲಿ ಚಿನ್ನಾಭರಣ ಸಾಗಣೆ ವಾಹನವನ್ನು ಎಫ್‌ಎಸ್‌ಟಿ ತಂಡ ವಶಕ್ಕೆ ಪಡೆಯಿತು. ಚುನಾವಣಾಧಿಕಾರಿ ಯೋಗಾನಂದ್, ನೂರುದ್ದೀನ್, ಶ್ರೀಕಾಂತ್, ಸಜಿತ್‌ಕುಮಾರ್, ಶಿವಕುಮಾರ್ ಇತರರಿದ್ದರು.
Published on

ಬೀರೂರು: ಬೀರೂರು-ಅಜ್ಜಂಪುರ ರಸ್ತೆಯಲ್ಲಿ ಶುಕ್ರವಾರ 9.41 ಕೋಟಿ ರೂ. ಮೌಲ್ಯದ 37.591 ಕೆಜಿ ಚಿನ್ನ ಮತ್ತು ಬೆಳ್ಳಿ ಆಭರಣವನ್ನು ವಾಹನ ಸಹಿತ ಎಫ್‌ಎಸ್‌ಟಿ ತಂಡ ವಶಕ್ಕೆ ಪಡೆದಿದೆ.

ಮಧ್ಯಾಹ್ನ ಅಜ್ಜಂಪುರದಿಂದ ಬೀರೂರು ಮಾರ್ಗವಾಗಿ ಬರುತ್ತಿದ್ದ ಸಿಕ್ವಿಲ್ ಗ್ಲೋಬಲ್ ಫ್ರೀಷಿಯಸ್ ಲಾಜಿಸ್ಟಿಕ್ ಕಂಪನಿಯ ವಾಹನವನ್ನು ತಪಾಸಣೆ ನಡೆಸಿದಾಗ 14 ಬಾಕ್ಸ್‌ಗಳಲ್ಲಿ ಆಭರಣಗಳು ಇದ್ದವು. ಚಿನ್ನಾಭರಣಗಳನ್ನು ವಿವಿಧ ಆಭರಣದ ಅಂಗಡಿಗಳಿಗೆ ತಲುಪಿಸಲು ಒಯ್ಯಲಾಗುತ್ತಿತ್ತು. ಸಮರ್ಪಕ ಬಿಲ್‌ಗಳು ಇದ್ದರೂ ಸಾಗಣೆಗೆ ಅನುಮತಿ ಪಡೆಯದ ಕಾರಣ ಚಿನ್ನಾಭರಣ ಹಾಗೂ ವಾಹನವನ್ನು ಎಫ್‌ಎಸ್‌ಟಿ ತಂಡ ವಶಕ್ಕೆ ಪಡೆಯಿತು.
ಕಾರ್ಯಾಚರಣೆಯಲ್ಲಿ ಕಡೂರು ಕ್ಷೇತ್ರದ ಚುನಾವಣಾ ಅಧಿಕಾರಿ ಯೋಗಾನಂದ್, ಎಫ್‌ಎಸ್‌ಟಿ ಅಧಿಕಾರಿ ನೂರುದ್ದೀನ್, ಬೀರೂರು ಸಿಪಿಐ ಶ್ರೀಕಾಂತ್, ಪಿಎಸ್‌ಐ ಸಜಿತ್‌ಕುಮಾರ್, ಸಿಬ್ಬಂದಿ ಶಿವಕುಮಾರ್, ಹೇಮಂತ್‌ಕುಮಾರ್, ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net