ಪ್ರತ್ಯೇಕ ಪ್ರಕರಣದಲ್ಲಿ 9.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

tunga-nagar-police-station
ತುಂಗಾನಗರ ಠಾಣೆ
Published on

ಶಿವಮೊಗ್ಗ: ಶಿವಮೊಗ್ಗ ನಗರ ಮತ್ತು ತಾಲೂಕಿನ ಪ್ರತ್ಯೇಕ ಮೂರು ಪ್ರಕರಣದಲ್ಲಿ 9.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.

ಶಿವಮೊಗ್ಗ ವಿವೇಕಾನಂದ ಬಡಾವಣೆಯ ಚಂದ್ರಾವತಿ, ಲಕ್ಕಿನಕೊಪ್ಪದ ಅಂಗನವಾಡಿ ಕಾರ್ಯಕರ್ತೆ ರೇಣುಕಮ್ಮ ಮತ್ತು ತಾಲೂಕಿನ ಹಾರನಹಳ್ಳಿಯ ಶಶಿಧರ್ ಎಂಬುವರ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿದೆ.
ಚಂದ್ರಾವತಿ ಅವರ ಮನೆಯಲ್ಲಿ 4.70 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ನ.9ರಂದು ಬಂಗಾರದ ಚೈನ್, ಉಂಗುರ, ನ.11ರಂದು ಬಂಗಾರದ ಬಳೆಗಳು, ಚೈನ್ ಮತ್ತು ಕಿವಿ ಓಲೆಗಳು ಕಳುವಾಗಿದ್ದು ಮಗನ ಮದುವೆ ಇದ್ದ ಕಾರಣ ತಡವಾಗಿ ದೂರು ದಾಖಲಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ರೇಣುಕಮ್ಮ ಬೆಂಗಳೂರಿನಲ್ಲಿ ಮುಷ್ಕರಕ್ಕೆ ತೆರಳಿದ್ದಾಗ 1.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳುವು ಮಾಡಲಾಗಿದೆ. ಬೀರುವಿನಲ್ಲಿದ್ದ ಒಂದು ಲಕ್ಷ ರೂ. ಮೌಲ್ಯದ ಚಿನ್ನದ ಉಂಗುರು, ಜುಮ್ಕಿ, ಚೈನ್, ಕಿವಿ ಸುತ್ತು ಮತ್ತು 40 ಸಾವಿರ ರೂ. ನಗದು ಕಳ್ಳತನವಾಗಿದೆ ಎಂದು ತುಂಗಾನಗರ ಠಾಣೆಗೆ ದೂರು ನೀಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ತಾಲೂಕಿನ ಹಾರನಹಳ್ಳಿಯ ಶಶಿಧರ್ ಅವರು ಕುಟುಂಬ ಸಮೇತ ದಾವಣಗೆರೆಯಲ್ಲಿದ್ದ ಮದುವೆಗೆ ತೆರಳಿದ್ದ ವೇಳೆ 3.20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳುವಾಗಿರುವುದು ಬೆಳಕಿಗೆ ಬಂದಿದೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net