8ರಂದು ‘ಸತ್ಯವನ್ನೇ ಹೇಳುತ್ತೇನೆ’ ನಾಟಕ ಪ್ರದರ್ಶನ; ಅಡ್ಡಂಡ ಕಾರ್ಯಪ್ಪ ಹೇಳಿಕೆ

ADDANDI KARYAPPA- press meet (1)
Published on

ಹಾಸನ: ಸ್ವಾತಂತ್ರ್ಯಪೂರ್ವ ಹಾಗೂ ನಂತರದ ವಿಚಾರಗಳನ್ನು ಒಳಗೊಂಡ ‘ಸತ್ಯವನ್ನೇ ಹೇಳುತ್ತೇನೆ’ ಎಂಬ ನಾಟಕ ಪ್ರದರ್ಶನ ಜ.8ರ ಬುಧವಾರದಂದು ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದು ಕೊಡಗು ರಂಗಭೂಮಿ ಟ್ರಸ್ಟ್ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪತಿಳಿಸಿದರು.

ಸ್ವಾತಂತ್ರ್ಯಪೂರ್ವ ಹಾಗೂ ನಂತರದ ಹಲವು ವಿಚಾರಗಳ ಬಗ್ಗೆ ಪಠ್ಯಗಳಲ್ಲಿ ಮರೆಮಾಚಿದ ಸತ್ಯಗಳನ್ನು ರಾಷ್ಟ್ರೀಯವಾದಿ ಚಿಂತನೆ ಅಡಿ ರಚಿತವಾಗಿರುವ ಸತ್ಯಾಂಶಗಳನ್ನು ನಾಟಕದಲ್ಲಿ ತೋರಿಸಲಾಗಿದೆ. ಇದನ್ನೇ ಮುಂದುವರಿಸಿ ಈಗಿನ ಡೋಂಗಿ ಜಾತ್ಯತೀತವಾದಿಗಳು, ಸರ್ಕಾರಗಳು ತಯಾರಿಸಿದ ಪಠ್ಯಗಳ ಸ್ಥಿತಿ ನೋಡಿದಾಗ, ಸ್ವಾತಂತ್ರೃ ಹೋರಾಟದ ಹಿರೋಗಳಿಂದಲೇ ನಮ್ಮ ಚರಿತ್ರೆಯ ಸತ್ಯಗಳನ್ನು ಬಾಯಿ ಬಿಡಿಸುವ ಪ್ರಯತ್ನವೇ ಈ ನಾಟಕದ ಆಶಯ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅನಿತಾ ಕಾರ್ಯಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net