

ಚಿತ್ರದುರ್ಗ: ಎಪಿಎಂಸಿ ಆವರಣದ ‘ಸಿ’ ಬ್ಲಾಕ್‍ನಲ್ಲಿ ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘ ನಿರ್ಮಿಸಿರುವ 1ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಉಗ್ರಾಣದ ಉದ್ಘಾಟನಾ ಸಮಾರಂಭ ಸೆ. 16ರಂದು ಬೆಳಗ್ಗೆ 11ಕ್ಕೆ ನಡೆಯಲಿದೆ.
ದಿ.ಶರಣ ಎಂ.ಗಂಗಾಧರಯ್ಯ ಅವರ ಜ್ಞಾಪಕಾರ್ಥ 89 ಲಕ್ಷ ರೂ ವೆಚ್ಚದಲ್ಲಿ ಉಗ್ರಾಣ ನಿರ್ಮಿಸಲಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಎಚ್.ಎಂ.ಮಂಜುನಾಥಪ್ಪ ಹೇಳಿದರು.
1956ರಲ್ಲಿ ಆರಂಭಗೊಂಡ ಸಂಘವು ಸುಮಾರು 73 ವರ್ಷಗಳಿಂದ ರೈತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ. ರಿಯಾಯಿತಿ ದರದಲ್ಲಿ ರಸಗೊಬ್ಬರ, ಪಿವಿಸಿ, ಜಿಎ ಹಾಗೂ ಹನಿ ನೀರಾವರಿ ಪೈಪ್ ಸೇರಿ ಬಿಡಿ ಭಾಗಗಳು ಲಭ್ಯವಿವೆ. ನಾಗರಿಕರ ಅನುಕೂಲಕ್ಕಾಗಿ ಜನೌಷಧಿ ಕೇಂದ್ರ ತೆರೆಯಲಾಗಿದ್ದು, ಖಾಸಗಿಯವರು ನಿರ್ವಹಿಸುತ್ತಿದ್ದಾರೆ. ಪ್ರಸ್ತುತ 80 ಲಕ್ಷ ರೂ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದು ವಿವರಿಸಿದರು.
ಹೊಸದುರ್ಗ ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಚಾರ್ಯ ಶ್ರೀ ನೇತೃತ್ವ ವಹಿಸುವರು. ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಸಭಾ ಕಾರ್ಯಕ್ರಮ ಉದ್ಘಾಟಿಸುವರು. ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸೇರಿ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಸಂಘದ ಉಪಾಧ್ಯಕ್ಷ ಸಿ. ಕುಬೇರಪ್ಪ, ನಿರ್ದೇಶಕರಾದ ಎಚ್.ಎನ್.ಹನುಮಂತಪ್ಪ, ಎ.ಈಶ್ವರಪ್ಪ, ಬಿ.ಆರ್.ಧನಂಜಯ, ಎನ್.ಕಲ್ಲೇಶ್, ವಿ.ವಿಶ್ವನಾಥಪ್ಪ,ಬಿ.ಲೋಲಾಕ್ಷಮ್ಮ, ಎ.ಎಂ.ಆನಂದಪ್ಪ, ವೈ.ಪ್ರಕಾಶ್, ಎನ್‍್.ಎಚ್.ಮಂಜುನಾಥ್, ವೈ.ಪ್ರಕಾಶ್, ಎಸ್.ಎಚ್.ತಿಪ್ಪೇಸ್ವಾಮಿ,ಜಿ.ಎಂ.ಪುಷ್ಪಾ,ನಿಶಾನಿ ಎಂ.ಜಯಣ್ಣ, ಕೆ.ಜೆ.ಶ್ರೀಧರ್ ಇತರರಿದ್ದರು.
Attachments area