ಬಳ್ಳಾರಿ : 66ವರ್ಷಗಳ ಬಳಿಕ ಅಖಿಲ ಭಾರತ ಸಾಹಿತ್ಯ ಸಮ್ಮೆಳನದ ಭಾಗ್ಯ ಒಲಿದು ಬಂದಿದ್ದು, ಜಿಲ್ಲೆಯಲ್ಲಿಯೇ ಸಮ್ಮೇಳನ ಆಯೋಜಿಸಲಾಗುವುದು ಎಂದು ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಹೇಳಿದರು.
ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 88 ನೇ ಸಮ್ಮೆಳನವನ್ನು ನೆರೆಯ ಆಂದ್ರಪ್ರದೇಶದ ಕನ್ನಡಿಗರಿಗೂ ಅನುಕೂಲವಾಗುವಂತೆ ಬಳ್ಳಾರಿ ನಗರದಲ್ಲೆ ಆಯೋಜಿಸಲು ಜಿಲ್ಲಾ ಕಾರ್ಯಕಾರಿ ಸಮಿತಿ ತೀರ್ಮಾನಿಸಿದೆ. ಮುಂದಿನ ತಿಂಗಳು ಡಾ.ಮಹೇಶ್ ಜೋಶಿ ಅವರ ನೇತೃತ್ವದಲ್ಲಿ ಸ್ವಾಗತ ಸಮಿತಿ ರಚನೆಯಾಗಲಿದ್ದು, ಸಮ್ಮೆಳನದ ಯಶಸ್ವಿಗೆ ಅಖಂಡ ಜಿಲ್ಲೆಯ ಕನ್ನಡ ಪರ ಸಂಘಟನೆಗಳು, ಸಂಸ್ಥೆಗಳು, ಸಾಹಿತಿಗಳು ಸೇರಿ ಜಿಲ್ಲೆಯ ಜನತೆ ಕೈಜೋಡಿಸಬೇಕೆಂದು ಕೋರಿದರು. 2004ರಿಂದಲೂ ಬಳ್ಳಾರಿಯಲಿ ್ಲ ಸಮ್ಮೆಳನ ನಡೆಸಲು ಒತ್ತಾಯಿಸಲಾಯಿತು. ಕೊನೆಗೆ 66ವರ್ಷಗಳ ಬಳಿಕ ಜಿಲ್ಲೆಯ ಸಂಸದ, ಶಾಸಕರ, ಸಂಘ ಸಂಸ್ಥೆಗಳ ಒತ್ತಾಯದಿಂದ ಸಮ್ಮೆಳನ ಬಳ್ಳಾರಿ ಪಾಲಿಗೆ ಒಲಿದು ಬಂದಿದೆ ಎಂದರು. ಮಂಡ್ಯದಲ್ಲಿ ನಡೆದಿರುವ 87 ನೇ ಸಮ್ಮೆಳನದಲ್ಲಿ ಕೇಂದ್ರ ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ 88ನೇ ಸಮ್ಮೆಳನಕ್ಕೆ ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಕೋಲಾರ ಸೇರಿ ಒಟ್ಟು 12 ಜಿಲ್ಲೆಗಳು ಬೇಡಿಕೆ ಇರಿಸಿದ್ದವು. ಇದರಲ್ಲಿ ಸರ್ವಾನುಮತದಿಂದ ಬಳ್ಳಾರಿ ಜಿಲ್ಲೆಯಲ್ಲಿ ಸಮ್ಮೆಳನ ನಡೆಸಲು ತೀರ್ಮಾನ ಕೈಗೊಂಡಿರುವುದು ಸ್ವಾಗತರ್ಹವಾಗಿದೆ ಎಂದರು. ಅಖಂಡ ಜಿಲ್ಲೆಯಲ್ಲಿ ಕಳೆದ ಐದು ಬಾರಿ ನಡೆದಿರುವ ಕನ್ನಡ ಸಾಹಿತ್ಯ ಸಮ್ಮೇಳನಗಳ ಬಗ್ಗೆ ವಿವರಿಸಿದರು.
ಕಸಾಪ ಮಾಜಿ ಜಿಲ್ಲಾಧ್ಯಕ್ಷರಾದ ಹಂಪನಗೌಡ, ಸಿದ್ದರಾಮಕಲ್ಮಠ, ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಡಾ.ಶಿವಲಿಂಗಪ್ಪ ಹಂದ್ಯಾಳ, ಚೋರನೂರು ಕೊಟ್ರಪ್ಪ, ಡಾ.ಬಸವರಾಜ್ ಗದಗಿನ, ಕೆ.ವಿ.ನಾಗೀರೆಡ್ಡಿ, ಕೋಳೂರು ವೆಂಕಟೇಶ್ ಹೆಗಡೆ ಇದ್ದರು.