ಕೊಡಗು ಜಿಲ್ಲೆಯಲ್ಲಿ ೮೮.೧೫ ಮಿ.ಮೀ. ಮಳೆ

rain
Published on

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೮೮.೧೫ ಮಿ.ಮೀ. ಮಳೆಯಾಗಿದೆ.

ಕಳೆದ ವರ್ಷ ಇದೇ ದಿನ ೪೧.೮೨ ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ ೧೮೫೮.೬೯ ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ ೧೧೦೫.೧೯ ಮಿ.ಮೀ ಮಳೆಯಾಗಿತ್ತು.


ಮಡಿಕೇರಿ ತಾಲೂಕಿನಲ್ಲಿ ೧೦೨.೪೭ ಮಿ.ಮೀ, ವಿರಾಜಪೇಟೆ ೭೯ ಮಿ.ಮೀ, ಪೊನ್ನಂಪೇಟೆ ತಾಲೂಕಿನಲ್ಲಿ ೯೮.೭೯ ಮಿ.ಮೀ. ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ೧೨೦.೬೦ ಮಿ.ಮೀ, ಕುಶಾಲನಗರ ತಾಲೂಕಿನಲ್ಲಿ ೩೯.೯೦ ಮಿ.ಮೀ. ಮಳೆಯಾಗಿದೆ.


ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೪೭.೨೦, ನಾಪೋಕ್ಲು ೧೩೪.೨೦, ಸಂಪಾಜೆ ೪೮.೫೦, ಭಾಗಮಂಡಲ ೧೮೦, ವಿರಾಜಪೇಟೆ ೭೮, ಅಮ್ಮತ್ತಿ ೮೦, ಹುದಿಕೇರಿ ೧೩೪.೧೦, ಶ್ರೀಮಂಗಲ ೧೫೩, ಪೊನ್ನಂಪೇಟೆ ೬೭, ಬಾಳೆಲೆ ೪೧.೧೯, ಸೋಮವಾರಪೇಟೆ ಕಸಬಾ ೧೨೨.೮೦, ಶನಿವಾರಸಂತೆ ೭೩, ಶಾಂತಳ್ಳಿ ೨೦೦, ಕೊಡ್ಲಿಪೇಟೆ ೮೬.೬೦, ಕುಶಾಲನಗರ ೧೭.೬೦, ಸುಂಟಿಕೊಪ್ಪ ೬೨.೨೦ ಮಿ.ಮೀ.ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net