

ಕೋಲಾರ: ಜಿಲ್ಲೆಯಲ್ಲಿ ಭಾನುವಾರ 87 ಮಂದಿಗೆ ಕರೊನಾ ಸೋಂಕು ದೃಢಪಟ್ಟರೆ ಒಂದೇ ದಿನ 168 ಮಂದಿ ಸೋಂಕಿನಿಂದ ಮುಕ್ತರಾಗಿದ್ದಾರೆ.
ಕೋಲಾರದಲ್ಲಿ 54, ಮಾಲೂರು 9, ಬಂಗಾರಪೇಟೆ 7, ಕೆಜಿಎಫ್ 4, ಮುಳಬಾಗಿಲು 13 ಮಂದಿಗೆ ಸೋಂಕು ದೃಢಪಟ್ಟರೆ, ಶ್ರೀನಿವಾಸಪುರದಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ. ವಿಷಮ ಶೀತಜ್ವರದಿಂದ ಬಳಲುತ್ತಿರುವ 55 ಮಂದಿಗೆ ಸೋಂಕು ದೃಢಪಟ್ಟಿದೆ. 27 ಮಂದಿಗೆ ಸಂಪರ್ಕಿತರಿಂದ ಕರೊನಾ ಹರಡಿದೆ. ಇತರ ಕಾರಣಗಳಿಂದ 5 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರ ಪ್ರಥಮ ಸಂಪರ್ಕದಲ್ಲಿದ್ದ 510, ದ್ವಿತೀಯ ಸಂಪರ್ಕದಲ್ಲಿದ್ದ 221 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಜಿಲ್ಲೆಯಲ್ಲಿ ಇದುವರೆಗೆ 2411 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಕೋಲಾರ ತಾಲೂಕು ಒಂದರಲ್ಲೇ 1039 ಮಂದಿಗೆ ಸೋಂಕು ತಗಲಿದೆ. ನಂತರದ ಸ್ಥಾನದಲ್ಲಿ ಮಾಲೂರಿನಲ್ಲಿ 339, ಮುಳಬಾಗಿಲಿನಲ್ಲಿ 302 ಬಂಗಾರಪೇಟೆಯಲ್ಲಿ 280, ಕೆಜಿಎ್ನಲ್ಲಿ 274 ಹಾಗೂ ಶ್ರೀನಿವಾಸಪುರದಲ್ಲಿ 177 ಮಂದಿ ಸೋಂಕಿಗೆ ತುತ್ತಾಗಿದ್ದಾರೆ.
168 ಮಂದಿ ಗುಣಮುಖ: ಕೋಲಾರದಲ್ಲಿಂದು 77 ಮಂದಿ ಗುಣಹೊಂದಿದ್ದು, ಮಾಲೂರಿನಲ್ಲಿ 20, ಬಂಗಾರಪೇಟೆಯಲ್ಲಿ 22, ಕೆಜಿಎಫ್‌ನಲ್ಲಿ 15, ಮುಳಬಾಗಿಲು 22 ಮತ್ತು ಶ್ರೀನಿವಾಸಪುರದಲ್ಲಿ 12 ಮಂದಿ ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ1276ಕ್ಕೆ ಏರಿದೆ. ಕೋಲಾರದಲ್ಲಿ 445, ಮಾಲೂರಿನಲ್ಲಿ 177, ಬಂಗಾರಪೇಟೆಯಲ್ಲಿ 130, ಕೆಜಿಎಫ್‌ನಲ್ಲಿ 136, ಮುಳಬಾಗಿಲಿನಲ್ಲಿ 118 ಹಾಗೂ ಶ್ರೀನಿವಾಸಪುರದಲ್ಲಿ 85 ಸೇರಿ 1091 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 29 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.