

ಹುಬ್ಬಳ್ಳಿ: ಷೇರು ಖರೀದಿ ಹಾಗೂ ಮಾರಾಟದ ಆಮಿಷವೊಡ್ಡಿದ ವಂಚಕರು, ನಗರದ ವ್ಯಾಪಾರಿಯೊಬ್ಬರಿಂದ ಆನ್‌ಲೈನ್ ಮೂಲಕ 87.51ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಕೇಶ್ವಾಪುರ ಆಜಾದ್ ಕಾಲನಿಯ ವಿಕ್ರಂ ವಂಚನೆಗೆ ಒಳಗಾದವರು. ಅಪರಿಚಿತರು ವಿಕ್ರಂ ಅವರಿಗೆ ವಾಟ್ಸ್‌ಆ್ಯಪ್ ಮೂಲಕ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ, ಚೋಲೋ ಗ್ರುಪ್ ಹೆಸರಿನ ವಾಟ್ಸ್‌ಆ್ಯಪ್ ಗ್ರುಪ್‌ಗೆ ಸೇರಿಸಿದ್ದಾರೆ. ನಂತರ ಅದರಲ್ಲಿ ಷೇರು ಖರೀದಿ ಮತ್ತು ಮರಾಟ ಮಾಡುವ ಬಗ್ಗೆ ತಿಳಿಸಿ, ಆಧಾರ್ ಕಾರ್ಡ್, ಪಾನ್ ಕಾರ್ಡ್ ಪಡೆದು ಷೇರು ಖರೀದಿ ಮಾಡಲು ತಿಳಿಸಿ ನಂಬಿಸಿದ್ದಾರೆ. ನಂತರ ತಮ್ಮ ವಿವಿಧ ಬ್ಯಾಂಕ್ ಖಾತೆಗಳಿಗೆ 87,51,320 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಸಿಇಎನ್ ಕ್ರೈಂ ಠಾಣೆಗೆ ನೀಡಿದ ದೂರಿನಲ್ಲಿ ವಿಕ್ರಂ ವಿವರಿಸಿದ್ದಾರೆ.