ಕಲಬುರಗಿ: ಕನ್ನಡ ಸಾಹಿತ್ಯ ಲೋಕದ ಇತಿಹಾಸ ಸಾರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 85ನೇ ಆವೃತ್ತಿ ಇಂದಿನಿಂದ ಬಿಸಿಲ ನಗರಿ ಕಲಬುರಗಿಯಲ್ಲಿ ಆರಂಭವಾಗಿದೆ. ಕಲಬುರಗಿಯು ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಸಾಂಸ್ಕೃತಿಕ ಕಲಾವೈಭವ ಮೇಳೈಸಿದೆ. ಸಮ್ಮೇಳನಾಧ್ಯಕ್ಷ ಎಚ್.ಎಸ್.ವೆಂಕಟೇಶ ಮೂರ್ತಿ ಅವರ ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಪಾಲ್ಗೊಂಡು ತಮ್ಮ ಕಲೆಯನ್ನು ಅನಾವರಣಗೊಳಿಸಿದರು. ಮೆರವಣಿಗೆಯಲ್ಲಿ ಮಕ್ಕಳು, ವಯಸ್ಕರೆನ್ನದೇ ಎಲ್ಲರು ಉತ್ಸಾಹದಿಂದ ಪಾಲ್ಗೊಂಡರು. ಎಂದಿನಂತೆ ಪರಸ್ಪರ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಮೆರವಣಿಯ ಉದ್ದಕ್ಕೂ ನಾಡಧ್ವಜ ಮನಸೂರೆಗೊಂಡಿತು. ಒಟ್ಟಾರೆ ಸಾಹಿತ್ಯ ಸಮ್ಮೇಳನದ ಮೆರವಣಿಗೆಯ ಸಂಪೂರ್ಣ ಚಿತ್ರಣವನ್ನು "ವಿಜಯವಾಣಿ ಛಾಯಾಗ್ರಾಹಕ ಸುಧೀಂದ್ರ ಶ್ರೀರಂಗರಾಜು" ಅವರು ಸೆರೆಹಿಡಿದಿದ್ದು, ಅವುಗಳ ಝಲಕ್ ಅನ್ನು ಈ ಕೆಳಗೆ ನೋಡಬಹುದಾಗಿದೆ.