ಅಗ್ಗದಾಂಗ್ಲ ಇರಲಿ, ಕನ್ನಡ ಆವರಿಸಲಿ: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಚ್​ಎಸ್​ವಿ ಆಶಯ

HSV
Published on

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ): ಭಾರತದ ಒಗ್ಗೂಡಿಕೆ ಮತ್ತು ಪ್ರಾಂತ್ಯ ಪ್ರಾಂತ್ಯಗಳ ನಡುವಣ ಸಲೀಸು ವ್ಯವಹಾರಕ್ಕಾಗಿ ಒಂದು ಭಾಷೆ ಅಗತ್ಯವೆನ್ನುವುದಾದರೆ ಅದು ಹಿಂದಿ ಆಗಬಾರದು. ಯಾವ ಭಾಷೆ ಒಂದು ಕಾಲದಲ್ಲಿ ಭಾರತದ ವೈಚಾರಿಕ ಸಾಹಿತ್ಯಕ ಮತ್ತು ಚಿಂತನೆಯ ಭಾಷೆಯಾಗಿತ್ತೋ ಅಂಥ ಸಂಸ್ಕೃತವನ್ನೋ ಅಥವಾ ಜನಸಾಮಾನ್ಯರ ವ್ಯವಹಾರ ಭಾಷೆಯಾಗಿದ್ದ ಪ್ರಾಕೃತವನ್ನೋ ನಾವು ಸೇತುವೆಯ ಭಾಷೆಯಾಗಿ ಬಹುವಾರ್ಷಿಕ ಯೋಜನೆಯಾಗಿ ಸಂಕಲ್ಪಿಸಿ ರೂಢಿಸುವುದು ಅಗತ್ಯ ಎಂದು 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಚ್.ಎಸ್.ವೆಂಕಟೇಶಮೂರ್ತಿ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ಬುಧವಾರ ಆರಂಭಗೊಂಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಚ್​ಎಸ್​ವಿ, ಭಾಷೆ, ಸಾಂಸ್ಕೃತಿಕ ತಳಮಳಗಳ ಜತೆಗೆ ಸಾಮಾಜಿಕ ವಿಷಯಗಳ ಬಗ್ಗೆಯೂ ಮಾತನಾಡಿ, ಪರಿಹಾರದ ಹೊಳಹುಗಳನ್ನು ನೀಡಿದರು. ಸಾಹಿತ್ಯಕ, ಸಾಂಸ್ಕೃತಿಕ ಚಿಂತನೆಯ ಭಾಷೆಯಾಗಿ ಇಂಗ್ಲಿಷನ್ನು ಭಾರತದ ಸಮಸ್ತರು ಕಲಿಯಬೇಕಾದ ಶಿರೋಭಾರವನ್ನು ಮೊದಲು ತಪ್ಪಿಸಬೇಕಿದೆ. ಜೀವನದ ಎಲ್ಲ ರಂಗಗಳಲ್ಲಿಯೂ ಕನ್ನಡ ಆವರಿಸಿಕೊಳ್ಳಬೇಕಿದೆ ಎಂದರು.

ಭಾಷೆ ಕಲಿಕೆಗೆ ತಾರತಮ್ಯವೇಕೆ?

ಕಲಿಕೆ ಎಂಬ ಮಾತು ಬಂದ ಕೂಡಲೇ ನಮ್ಮ ಶಿಕ್ಷಣ ವ್ಯವಸ್ಥೆ ನಮ್ಮ ಕಣ್ಮುಂದೆ ಮೆರವಣಿಗೆ ನಡೆಸುತ್ತದೆ. ನಾವು ಕಲಿಯಬೇಕಾದದ್ದು ಕನ್ನಡದಲ್ಲಿ. ಜತೆಜತೆಯಲ್ಲೇ ಮಕ್ಕಳು ಇನ್ನೆರಡು ಭಾಷೆಗಳನ್ನೂ ಕಲಿಯಬಹುದು ಎಂಬ ತ್ರಿಭಾಷಾ ಸೂತ್ರವನ್ನು ನಾವು ಮಾನ್ಯ ಮಾಡುವುದಾದರೆ ಭಾರತದ ಎಲ್ಲ ಪ್ರಾಂತ್ಯಗಳಿಗೂ ಅದು ಸಮಾನವಾಗಿ ಅನ್ವಯಿಸಬೇಕು. ದಕ್ಷಿಣದ ಮಕ್ಕಳಿಗೆ ಮೂರು ಭಾಷೆ, ಹಿಂದಿ ಮಾತೃಭಾಷೆಯಾಗಿರುವ ಉತ್ತರದ ಬಹುಪಾಲು ಪ್ರಾಂತ್ಯಗಳ ಮಕ್ಕಳಿಗೆ ಎರಡು ಭಾಷೆ ಎಂಬಂತಾಗಬಾರದು. ಹಿಂದಿ ಭಾಷೆಯನ್ನು ಆಡುವ ಮಕ್ಕಳು ಹಿಂದಿ ಇಂಗ್ಲಿಷ್​ಗಳ ಜತೆಗೆ ಇನ್ನೊಂದು ಭಾರತದ ಭಾಷೆ ಕಲಿಯುವಂತಾಗಬೇಕು. ಒಂದು ತನ್ನ ಪರಿಸರದ ನುಡಿ, ಮತ್ತೆರಡು ಆಯಾ ಮಗುವಿನ ಅಗತ್ಯಕ್ಕೆ ತಕ್ಕಂತೆ ಇನ್ನೆರಡು ಭಾಷೆಗಳು, ಆದರೆ ಕಲಿಯುವ ಭಾಷೆಗಿಂತ ಮಕ್ಕಳಿಗೆ ಕಲಿಸುವ ಭಾಷೆ ಯಾವುದಾಗಬೇಕೆಂಬುದೇ ಈವತ್ತಿನ ಜರೂರು ಸಮಸ್ಯೆ, ಬೇರೆ ಬೇರೆ ವಿಷಯಗಳನ್ನು ಮಕ್ಕಳು ಪರಿಸರದ ನುಡಿಯಲ್ಲೇ ಕಲಿಯುವುದು ಯುಕ್ತ.

ಸಮ್ಮೇಳನಾಧ್ಯಕ್ಷರ ಮಾತುಗಳು

ಯಹೂದಿಗಳು ಯಿದ್ದಿಷ್ ಭಾಷೆಯನ್ನು ರೂಢಿಸಿದಂತೆ, ಸದ್ಯಕ್ಕೆ ಇಂಗ್ಲಿಷ್ ಭಾಷೆಯನ್ನು ಭಾರತದ ಬೇರೆಬೇರೆ ಪ್ರಾಂತ್ಯಗಳ ನಡುವಿನ ಸಂಪರ್ಕ ಭಾಷೆಯಾಗಿ ಬಳಸಬಹುದು. ಅಂಥ ವ್ಯಾವಹಾರಿಕ ಇಂಗ್ಲಿಷನ್ನು ಎಲ್ಲ ಭಾಷಿಕರಿಗೂ ಕೆಲವೇ ತಿಂಗಳ ಭಾಷಾ ಶಿಬಿರಗಳಲ್ಲಿ ಕಲಿಸಬಹುದು. ಆ ಭಾಷೆ ವ್ಯವಹಾರಕ್ಕೆ ಅಗತ್ಯವಿರುವಷ್ಟು ಶಬ್ದಕೋಶದಿಂದ ರೂಪಿತವಾಗಬೇಕು. ಆ ಭಾಷೆಯಲ್ಲಿ ವ್ಯಾಕರಣಕ್ಕಿಂತ ವ್ಯವಹರಣ, ಪ್ರೌಢಿಮೆಗಿಂತ ಸಂವಹನ, ಪರಿಶುದ್ಧಿಗಿಂತ ಪ್ರಯೋಜನ ಮುಖ್ಯವಾಗಬೇಕು. ಅಮೆರಿಕನ್ ಇಂಗ್ಲಿಷ್ ಎಂಬಂತೆ ಅದು ನಾವೇ ರೂಢಿಸುವ ಭಾರತೀಯರ ನಾಲಗೆಗೆ ಒಗ್ಗುವ ಇಂಡಿಯನಿಂಗ್ಲಿಷ್ ಆಗಬೇಕು. ಅದನ್ನು ಅಗ್ಗದಾಂಗ್ಲ ಎಂದು ಕರೆಯಬಹುದು. ದಕ್ಕಬೇಕಾದ ಎಲ್ಲವೂ ನಮಗೆ ಕನ್ನಡದ ಮೂಲಕವೇ ದಕ್ಕಬೇಕು ಎಂದು ಸಲಹೆ ನೀಡಿದರು.

ಭಾಷೆಯಿಂದ ಭಾವ ಬೆರೆಯುವಿಕೆ: ಕಲಬುರಗಿ ನೆಲವು ಕನ್ನಡ ಮತ್ತು ಉರ್ದುವನ್ನು ಹೇಗೆ ಬೆರೆಸಿ ಬಳಸಿ ಹೊಸ ಜೀವಭಾಷೆಯನ್ನು ನಿರ್ವಿುಸಿ ಸಾರ್ಥಕ್ಯ ಪಡೆಯಿತು ಎಂಬುದನ್ನು ನಾವು ತತ್ವಪದಕಾರರ ಭಾಷಾ ನಿಯೋಗದಲ್ಲಿ ಬಲ್ಲವರಾಗಿರುವೆವು. ಭಾಷೆಗಳ ಬೆರೆಯುವಿಕೆ ಭಾವಗಳ ಬೆರೆಯುವಿಕೆಯೂ ಹೌದು. ಅರ್ಥ, ಪರಮಾರ್ಥ, ಪ್ರಯೋಗಾರ್ಥಗಳೆಲ್ಲ ಈ ಸಂಯುಕ್ತ ಸಂಗಮದಲ್ಲಿ ಒಡನಾಡಿ ಬೆರೆಯುವವು. ಬೆರೆತೂ ತಮ್ಮ ಮೂಲ ರೂಪವನ್ನು ಜತನವಾಗಿ ಕಾಯ್ದುಕೊಳ್ಳುವುವು.

ಪರಂಪರೆಯ ನೆನಪು ಮರುಕಳಿಸಬೇಕಿದೆ: ಸಾವಿರ ವರ್ಷದ ಕನ್ನಡ ಸಾಹಿತ್ಯ ಪರಂಪರೆಯ ನೆನಪನ್ನು ಹೊಸ ಪೀಳಿಗೆಯ ಮನಸ್ಸಲ್ಲಿ ಮತ್ತೆ ಉಜ್ಜೀವಿಸುವ ತುರ್ತಯತ್ನಗಳನ್ನು ಕೈಗೊಳ್ಳಲೇಬೇಕಾಗಿದೆ. ಮೊದಲೆಲ್ಲ ಪಠ್ಯಗಳಲ್ಲಾದರೂ ಪ್ರಾಚೀನ ಸಾಹಿತ್ಯದ ಪರಿಚಯವಾಗುತ್ತಿದ್ದವು. ಈಗ ಶಿಕ್ಷಣ ಕ್ರಮದಿಂದಲೇ ಕನ್ನಡ ಭಾಷೆ-ಆ ಭಾಷೆಯಲ್ಲಿ ಮೈದಾಳಿದ ಸಾಹಿತ್ಯ ಮತ್ತು ವೈಚಾರಿಕತೆ ನಮ್ಮ ಮಕ್ಕಳಿಂದ ದೂರವಾಗುತ್ತಿದೆ. ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವ ಶಾಲೆಗಳು ಕೂಡ ದಿನೇದಿನೇ ಕಡಿಮೆಯಾಗುತ್ತಿವೆ. ಹಳ್ಳಿಗಳಲ್ಲಿ ನಾವು ಮಕ್ಕಳಿದ್ದಾಗ ಇದ್ದಂಥ ಸಾಹಿತ್ಯಕ ಸಾಂಸ್ಕೃತಿಕ ಸಾಮುದಾಯಿಕ ಜೀವನ ಕ್ರಮಗಳು ಈಗ ಕಾಣೆಯಾಗುತ್ತಿವೆ.

ಸಂಪತ್ತು ನಾಚಿಕೆಯ ಸಂಗತಿಯಾಗಬೇಕು!: ಭ್ರಷ್ಟಾಚಾರಕ್ಕೆ ಸ್ವಾರ್ಥ ಕೇಂದ್ರಿತ ಜೀವನ ಸಿದ್ಧಾಂತವೇ ಕಾರಣ. ಪರ್ವತಾರಣ್ಯ, ವನ್ಯಜೀವಿ, ನದಿಗಳ ನಾಶ! ಇಕಾಲಜಿ ಎಂಬ ತತ್ತ್ವವನ್ನು ಗಾಳಿಗೆ ತೂರಿ ಐಶ್ವರ್ಯ ಸಂಪಾದನೆ ಅವ್ಯಾಹತವಾಗಿ ನಡೆಯುತ್ತಿದೆ. ಐಟಿ ಕಣ್ಣನ್ನೂ ತಪ್ಪಿಸಿ ನಗನಿಕ್ಷೇಪಗಳು ಕತ್ತಲ ರಕ್ಷಾ ಕೋಣೆಗಳಲ್ಲಿ ವೃದ್ಧಿಸುತ್ತಲೇ ಇವೆ. ತಾಯ ಮೊಲೆ ಹಾಲೇ ವಿಷವಾಗಿ ಕೊಲ್ಲಲೆಳಸಿದರೆ ಕಾಯಬಲ್ಲ ದೈವವನ್ನು ಎಲ್ಲಿಂದ ತರೋಣ?

ಬಹುಭಾಷಾ ಸಂಸ್ಕೃತಿ ಅನಿವಾರ್ಯ: ಗಡಿವಿವಾದಗಳು ಇನ್ನೂ ಬಗೆಹರಿದಿಲ್ಲ. ಕನ್ನಡ ಪರವಾಗಿ ಬಂದ ವರದಿಗಳು ಅನುಷ್ಠಾನಕ್ಕೆ ಬಂದಿಲ್ಲ. ಗಡಿ ಪ್ರಾಂತ್ಯಗಳು ಬಹುಭಾಷಾ ಸಂಸ್ಕೃತಿ ಒಪ್ಪಿಕೊಳ್ಳುವುದು ಅನಿವಾರ್ಯ. ಬಹುತ್ವ ಮನ್ನಿಸುವ ಏಕೀಕರಣ ನಮ್ಮ ಅಗತ್ಯ.

ನಾಯಕರು ಯಾರು?: ನಮ್ಮ ನವಯುಗದ ನಾಯಕರು ಯಾರು ಎಂಬುದನ್ನು ಗುರುತಿಸಿಕೊಳ್ಳಬೇಕಾದುದು ಇವತ್ತಿನ ಮೊದಲ ಅಗತ್ಯ; ನಾಯಕತ್ವದ ಹೊಣೆ ಅರಿತು ಜೀವನದ ವಿಭಿನ್ನ ಕಾರ್ಯಕ್ಷೇತ್ರಗಳಲ್ಲಿ ನಾಯಕರಾಗಿ ನಿಲ್ಲುವುದು ಎರಡನೆಯ ಗುರುತರ ಜವಾಬ್ದಾರಿ, ರಾಜಕೀಯ ನಾಯಕರಿರುವಂತೆ ರೈತ, ಯೋಧ, ಉದ್ಯಮಿ, ಸಿನಿಮಾ, ಕ್ರೀಡಾ, ಭಾಷಾಸಂಸ್ಕೃತಿ ನಾಯಕರ ಪಡೆ ನಿರ್ವಣಗೊಳ್ಳಬೇಕಾಗಿದೆ.

ಉದ್ಯೋಗ ಮೀಸಲಾತಿ: ಕನ್ನಡವನ್ನು ಅನ್ನದ ಭಾಷೆಯಾಗಿ ರೂಢಿಸುವುದೆಂದರೆ, ಕನ್ನಡಿಗರಿಗೆ ಸಿಂಹಪಾಲು ಉದ್ಯೋಗ ಮೀಸಲಾತಿ ಜಾರಿಗೆ ತರುವುದು ಬಹುಮುಖ್ಯ ಅಗತ್ಯ. ಅನ್ನ ಸಂಪಾದನೆಯು ಕೈಂಕರ್ಯ ಮತ್ತು ದುಡಿಮೆಯ ಕಾಯಕಯೋಗವಲ್ಲದೆ ಭಾಷಾ ಪರಿಣತಿಯ ಫಲವಲ್ಲ ಎಂಬುದನ್ನು ನಾವು ಗ್ರಹಿಸಬೇಕಾಗಿದೆ.

ಮಹಾರಥಿ ಯಾರು?: ಸಮಾಜದಲ್ಲಿ ಆತ್ಮರಕ್ಷಣೆ ಮುಖ್ಯವಾಗಿದೆಯೇ ವಿನಃ ಆರ್ತರಕ್ಷಣೆ ಯಲ್ಲ. ಯುದ್ಧದಲ್ಲಿ ಸಾರಥಿ, ಧ್ವಜ, ಸೇನೆ ಜತೆ ತನ್ನನ್ನೂ ರಕ್ಷಿಸಿಕೊಳ್ಳಲು ಸಮರ್ಥನೋ ಅವನು ಮಹಾರಥಿ. ಈ ತತ್ತ್ವವನ್ನು ನಮ್ಮ ನಾಯಕರಿಗೆ ಅನ್ವಯಿಸಿ ಅರ್ಥೈಸಬೇಕಿದೆ. ಯಾರು ತನ್ನ ನೆಲೆಯನ್ನು, ನಾಡನ್ನು, ಕಾಡುಬೆಟ್ಟಗಳನ್ನು, ಅಲ್ಲಿ ಜೀವಿಸುವ ಮೃಗಪಕ್ಷಿ ಗಳನ್ನು, ತನ್ನ ಆಶ್ರಿತರನ್ನು ಮತ್ತು ಕೊನೆಗೆ ತನ್ನನ್ನೂ ರಕ್ಷಿಸಿಕೊಳ್ಳಬಲ್ಲನೋ ಆತ ಈವತ್ತಿನ ರಾಜಧರ್ಮದ ಮಹಾರಥಿ. ಅಂಥವರನ್ನು ನಾವು ಶಬರಿ ಶ್ರದ್ಧೆಯಲ್ಲಿ ನಿರೀಕ್ಷಿಸಬೇಕಿದೆ.

ಕಿರು ಚಿತ್ರಮಂದಿರಗಳಾಗಲಿ: ಗಂಭೀರ ಕಲಾಚಿಂತನೆಯ ಹತ್ತಾರು ಕಲಾತ್ಮಕ ಚಿತ್ರಗಳು ಕನ್ನಡದಲ್ಲಿ ಈಗಲೂ ನಿರ್ವಣಗೊಳ್ಳುತ್ತಿವೆ. ಈಗ ಹೊಸ ಹೊಸ ನಿರ್ದೇಶಕರು ಈ ನಿರ್ವಣಗಳ ಮುಂಚೂಣಿಯಲ್ಲಿದ್ದಾರೆ. ಈ ಚಿತ್ರಗಳ ಬಿಡುಗಡೆಗಾಗಿ ಪ್ರತಿ ಜಿಲ್ಲೆಯಲ್ಲೂ ಕಿರು ಚಿತ್ರಮಂದಿರಗಳನ್ನು ನಿರ್ವಿುಸುವುದು ಸರ್ಕಾರದ ಬಹುದೊಡ್ಡ ಹೊಣೆಗಾರಿಕೆ.

ಅನುವಾದ ಬೆಳೆಯಲಿ: ಕನ್ನಡದ ಮಹತ್ ಕೃತಿಗಳು ಇಂಗ್ಲಿಷಿಗೆ ಬರುವುದು ವಿಶ್ವ ನೆಲೆಯಲ್ಲಿ ಕನ್ನಡ ಸಾಹಿತ್ಯವು ಸ್ಥಾಪಿತವಾಗಲು ಅತ್ಯಗತ್ಯ. ಕನ್ನಡ ಕೃತಿಗಳು ಹಿಂದಿ ಮೊದಲಾದ ಭಾರತದ ಇತರ ಭಾಷೆಗಳಿಗೆ ತರ್ಜುಮೆಗೊಳ್ಳುವುದು ಅದಕ್ಕಿಂತ ತುರ್ತು ಅಗತ್ಯ. ಇವು ಅಳಿವಿಲ್ಲದೆ ಹರಿಯಬೇಕು. ಬೆರೆಯಬೇಕು. ಒಂದರಿಂದ ಒಂದು ಪುಷ್ಟಗೊಳ್ಳಬೇಕು.

  • ನಮ್ಮ ಪರಿಸರದ ನುಡಿಯಲ್ಲೇ ನಮ್ಮ ಸರೀಕರೊಂದಿಗೆ ನಾವು ವ್ಯವಹರಿಸಬೇಕು. ಕರ್ನಾಟಕದ ಒಜ್ಜೀವನಶಕ್ತಿ ಕನ್ನಡದಲ್ಲಿ ಇರುವುದರಿಂದ ನಮ್ಮ ಒಕ್ಕೊರಲ ಹಾಡುಗಳು ಕನ್ನಡದಲ್ಲಿಯೇ ಅನುರಣಿಸಬೇಕು. ನಮ್ಮ ಪ್ರಾಥಮಿಕ ಕಲಿಕೆಯಂತೂ ನಮ್ಮ ಪರಿಸರದ ಭಾಷೆಯಾದ ಕನ್ನಡದಲ್ಲೇ ನಡೆಯಬೇಕು.
  • ಶಿಕ್ಷಣ ಒಂದು ವ್ಯಾಪಾರೀ ಉದ್ಯಮವಲ್ಲ. ಇಂಗ್ಲಿಷ್ ಅನ್ನವನ್ನು ಕೊಡುವ ಭಾಷೆ ಅನ್ನುವಿರೋ? ನಮ್ಮ ರೈತರು ಇಂಗ್ಲಿಷ್ ಭಾಷೆಯ ಹಂಗಿಲ್ಲದೆ ಅನ್ನ ಬೆಳೆಯುವ, ಕೊಡುವ ನಿತ್ಯಾನುಷ್ಠಾನದಲ್ಲಿ ತತ್ಪರರಾಗಿದ್ದಾರೆ.
  • ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಅವಜ್ಞತೆಗೆ ಒಳತಾಯಿತೆಂದರೆ, ಎಲ್ಲವನ್ನೂ ಮಕ್ಕಳಿಗೆ ನಾವು ಇಂಗ್ಲಿಷಿನಲ್ಲೇ ಬೋಧಿಸುವುದಾದರೆ ಕನ್ನಡದಲ್ಲಿ ಹೊಸದನ್ನು ಹುಟ್ಟಿಸುವ ಶಕ್ತಿಯನ್ನು ನಮ್ಮ ಮಕ್ಕಳು ಕಳೆದುಕೊಳ್ಳುವರು. ಸೃಷ್ಟಿಯ ಶಕ್ತಿಯನ್ನು ಕಳೆದುಕೊಂಡಂತೆಯೇ ಗ್ರಹಿಕೆಯ ಶಕ್ತಿಯನ್ನು ಕಳೆದುಕೊಳ್ಳುವವರು. ಮಕ್ಕಳ ನಾಲಗೆಯಿಂದ ಕನ್ನಡದ ಬೀಜಾಕ್ಷರಗಳೇ ಮಾಯವಾಗುತ್ತಿರಲು ಅವರಾದರೂ ಕನ್ನಡ ಕೃತಿಗಳನ್ನು ಓದಲು ಹೇಗೆ ಸಮರ್ಥರಾಗುವವರು?

ಭಾಷೆ ಕಲಿಕೆಗೆ ತಾರತಮ್ಯವೇಕೆ?

ಕಲಿಕೆ ಎಂಬ ಮಾತು ಬಂದ ಕೂಡಲೇ ನಮ್ಮ ಶಿಕ್ಷಣ ವ್ಯವಸ್ಥೆ ನಮ್ಮ ಕಣ್ಮುಂದೆ ಮೆರವಣಿಗೆ ನಡೆಸುತ್ತದೆ. ನಾವು ಕಲಿಯಬೇಕಾದದ್ದು ಕನ್ನಡದಲ್ಲಿ. ಜತೆಜತೆಯಲ್ಲೇ ಮಕ್ಕಳು ಇನ್ನೆರಡು ಭಾಷೆಗಳನ್ನೂ ಕಲಿಯಬಹುದು ಎಂಬ ತ್ರಿಭಾಷಾ ಸೂತ್ರವನ್ನು ನಾವು ಮಾನ್ಯ ಮಾಡುವುದಾದರೆ ಭಾರತದ ಎಲ್ಲ ಪ್ರಾಂತ್ಯಗಳಿಗೂ ಅದು ಸಮಾನವಾಗಿ ಅನ್ವಯಿಸಬೇಕು. ದಕ್ಷಿಣದ ಮಕ್ಕಳಿಗೆ ಮೂರು ಭಾಷೆ, ಹಿಂದಿ ಮಾತೃಭಾಷೆಯಾಗಿರುವ ಉತ್ತರದ ಬಹುಪಾಲು ಪ್ರಾಂತ್ಯಗಳ ಮಕ್ಕಳಿಗೆ ಎರಡು ಭಾಷೆ ಎಂಬಂತಾಗಬಾರದು. ಹಿಂದಿ ಭಾಷೆಯನ್ನು ಆಡುವ ಮಕ್ಕಳು ಹಿಂದಿ ಇಂಗ್ಲಿಷ್​ಗಳ ಜತೆಗೆ ಇನ್ನೊಂದು ಭಾರತದ ಭಾಷೆ ಕಲಿಯುವಂತಾಗಬೇಕು. ಒಂದು ತನ್ನ ಪರಿಸರದ ನುಡಿ, ಮತ್ತೆರಡು ಆಯಾ ಮಗುವಿನ ಅಗತ್ಯಕ್ಕೆ ತಕ್ಕಂತೆ ಇನ್ನೆರಡು ಭಾಷೆಗಳು, ಆದರೆ ಕಲಿಯುವ ಭಾಷೆಗಿಂತ ಮಕ್ಕಳಿಗೆ ಕಲಿಸುವ ಭಾಷೆ ಯಾವುದಾಗಬೇಕೆಂಬುದೇ ಈವತ್ತಿನ ಜರೂರು ಸಮಸ್ಯೆ, ಬೇರೆ ಬೇರೆ ವಿಷಯಗಳನ್ನು ಮಕ್ಕಳು ಪರಿಸರದ ನುಡಿಯಲ್ಲೇ ಕಲಿಯುವುದು ಯುಕ್ತ.

ಪೂರ್ತಿ ಭಾಷಣ ಓದದ ಎಚ್​ಎಸ್​ವಿ!

ಅನುವಾದ ಬೆಳೆಯಲಿ: ಕನ್ನಡದ ಮಹತ್ ಕೃತಿಗಳು ಇಂಗ್ಲಿಷಿಗೆ ಬರುವುದು ವಿಶ್ವ ನೆಲೆಯಲ್ಲಿ ಕನ್ನಡ ಸಾಮುಖ್ಯಮಂತ್ರಿಗಳ ಸಮಯಲಭ್ಯತೆ ಮತ್ತು ನಿರೀಕ್ಷೆಗೂ ಮೀರಿ ಜನಜಂಗುಳಿ ಏಕಾಂತ ಕವಿಯನ್ನು ಕಾಡಿದ ಪರಿಣಾಮ ಎಚ್​ಎಸ್​ವಿ ಪೂರ್ತಿ ಭಾಷಣ ಓದಲೇ ಇಲ್ಲ. ಭಾಷಣದ ಆರಂಭದಲ್ಲೇ ಈ ಸಂಗತಿಯನ್ನು ಪ್ರಸ್ತಾಪಿಸಿದ ಎಚ್​ಎಸ್​ವಿ, ಮುದ್ರಿತ ಭಾಷಣಪ್ರತಿಯ ಹಲವಾರು ಪುಟಗಳನ್ನು ಬಿಟ್ಟು, ಅತೀ ಮುಖ್ಯ ಸಂಗತಿಗಳನ್ನಷ್ಟೇ ಓದಿದರು. ಸಮ್ಮೇಳನಾಧ್ಯಕ್ಷರು ಮಾತನಾಡುವಾಗ ಜನರ ಓಡಾಟ, ಮಾತು ಹೆಚ್ಚಾಗಿದ್ದರಿಂದ ಮನು ಬಳಿಗಾರ ಶಾಂತವಾಗಿರುವಂತೆ ಸಭಿಕರಿಗೆ ಕೋರಿದ ಘಟನೆಯೂ ನಡೆಯಿತು.

ಹಿತ್ಯವು ಸ್ಥಾಪಿತವಾಗಲು ಅತ್ಯಗತ್ಯ. ಕನ್ನಡ ಕೃತಿಗಳು ಹಿಂದಿ ಮೊದಲಾದ ಭಾರತದ ಇತರ ಭಾಷೆಗಳಿಗೆ ತರ್ಜುಮೆಗೊಳ್ಳುವುದು ಅದಕ್ಕಿಂತ ತುರ್ತು ಅಗತ್ಯ. ಇವು ಅಳಿವಿಲ್ಲದೆ ಹರಿಯಬೇಕು. ಬೆರೆಯಬೇಕು. ಒಂದರಿಂದ ಒಂದು ಪುಷ್ಟಗೊಳ್ಳಬೇಕು.

ಕಲಬುರಗಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವನ್ನು ಸಿಎಂ ಯಡಿಯೂರಪ್ಪ ಉದ್ಘಾಟಿಸಿದರು. ಸರ್ವಾಧ್ಯಕ್ಷ ಡಾ.ಎಚ್.ಎಸ್. ವೆಂಕಟೇಶಮೂರ್ತಿ, ಡಿಸಿಎಂ ಗೋವಿಂದ ಕಾರಜೋಳ, ಸಚಿವ ಸಿ.ಟಿ.ರವಿ, ಡಾ.ಮನು ಬಳಿಗಾರ, ಡಾ.ಚಂದ್ರಶೇಖರ ಕಂಬಾರ, ಸಂಸದ ಡಾ.ಉಮೇಶ ಜಾಧವ್, ಶಾಸಕರಾದ ಸುಭಾಷ ಗುತ್ತೇದಾರ್, ಬಸವರಾಜ ಮತ್ತಿಮೂಡ, ದತ್ತಾತ್ರೇಯ ಪಾಟೀಲ್ ರೇವೂರ, ಎಂ.ವೈ.ಪಾಟೀಲ್, ಡಾ.ಅಜಯಸಿಂಗ್, ಮಾಲೀಕಯ್ಯ ಗುತ್ತೇದಾರ್ ಇತರರಿದ್ದರು.

ಕರ್ನಾಟಕ ನಾಡು-ನುಡಿ ಅಸ್ಮಿತೆಯ ರಕ್ಷಣೆಗೆ ನಮ್ಮ ಸರ್ಕಾರ ಬದ್ಧ. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ, ಮಹಾಜನ್ ವರದಿ ಮಂಡನೆ ಆದಾಗಿನಿಂದ ರಾಜಕೀಯ ಕಾರಣಕ್ಕೆ ಗೊಂದಲ ಆಗುತ್ತಿದೆ. ವಿವಾದ ಸುಪ್ರೀಂಕೋರ್ಟ್ ನಲ್ಲಿದ್ದು, ರ್ತಾಕ ಅಂತ್ಯ ಕಾಣಿಸಲು ನಮ್ಮ ಸರ್ಕಾರ ಪೂರಕ ಕಾರ್ಯತಂತ್ರ ರೂಪಿಸಲಿದೆ. | ಯಡಿಯೂರಪ್ಪ ಮುಖ್ಯಮಂತ್ರಿ

ಭಾಷಾ ಮಾಧ್ಯಮ, ಸುಪ್ರೀಂ ತೀರ್ಪಿನ ವಿರುದ್ಧ ಮೇಲ್ಮನವಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ): 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನವೇ ಕಲಬುರಗಿಯಲ್ಲಿ ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದ ಮಹತ್ವದ ನಿರ್ಧಾರವೊಂದು ಹೊರಬಿದ್ದಿದೆ. ಭಾಷಾ ಮಾಧ್ಯಮ ವಿಚಾರದಲ್ಲಿನ ಬೆಳವಣಿಗೆ ಕುರಿತಂತೆ ಸಮ್ಮೇಳನಾಧ್ಯಕ್ಷ ಎಚ್.ಎಸ್. ವೆಂಕಟೇಶಮೂರ್ತಿ ತಮ್ಮ ಭಾಷಣದಲ್ಲಿ ಸಾತ್ವಿಕ ಸಿಟ್ಟನ್ನು ಹೊರಹಾಕಿ ಸರ್ಕಾರವನ್ನು ಚುಚ್ಚೆಬ್ಬಿಸಿದರು. ಸಮ್ಮೇಳನಾಧ್ಯಕ್ಷರ ಭಾಷಣವನ್ನು ಆಲಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ, ಸುಪ್ರೀಂ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಸರ್ವಾಧ್ಯಕ್ಷರ ಸೂಚನೆ ಇದೆ. ನಾಡು ನುಡಿ ರಕ್ಷಣೆಗೆ ನಮ್ಮ ಸರ್ಕಾರ ಬದ್ಧ . ಬಜೆಟ್ ಅಧಿವೇಶನ ನಂತರ ಪ್ರತಿಪಕ್ಷಗಳು, ಸಾಹಿತಿಗಳು ಸೇರಿ ವಿವಿಧ ಕ್ಷೇತ್ರದ ಗಣ್ಯರೊಂದಿಗೆ ಸಿಎಂ ನೇತೃತ್ವದಲ್ಲಿ ರ್ಚಚಿಸುವುದಾಗಿ ಸ್ಪಷ್ಟಪಡಿಸಿದರು.ಇದು ಎಲ್ಲ ಪ್ರಾದೇಶಿಕ ಭಾಷೆಗಳ ಸಮಸ್ಯೆ ಆಗಿರುವುದರಿಂದ ಅಗತ್ಯಬಿದ್ದರೆ ಇತರ ರಾಜ್ಯಗಳ ಜತೆ ಒಟ್ಟಾಗಿ ಹೋಗಲಿ, ಸಿಎಂ ಯಡಿಯೂರಪ್ಪ ನೇತೃತ್ವ ವಹಿಸುವರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net