ಮಹಾ ಖಂಡನೆ ಠರಾವು: ಮಹಾಜನ್ ವರದಿಯೇ ಅಂತಿಮ

Sahitya
Published on

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ): ‘ಕರ್ನಾಟಕದ ಜತೆ ಕಾಲು ಕೆದರಿ ಗಡಿ ವಿವಾದ ಕೆದಕುತ್ತಿರುವ ಮಹಾರಾಷ್ಟ್ರದ ಉದ್ಧಟತನವನ್ನು ಕನ್ನಡ ಸಾಹಿತ್ಯ ಪರಿಷತ್ ಜತೆಗೆ ಸಮ್ಮೇಳನ ಕೂಡ ತೀವ್ರವಾಗಿ ಖಂಡಿಸುತ್ತದೆ. ಮಹಾಜನ್ ವರದಿಯೇ ಅಂತಿಮವಾದ್ದರಿಂದ ಅದನ್ನು ಅನುಷ್ಠಾನಗೊಳಿಸುವ ಮೂಲಕ ವಿವಾದ ಅಂತ್ಯಗೊಳಿಸಬೇಕು..’- ಇದೂ ಸೇರಿದಂತೆ ಕನ್ನಡ ನಾಡು, ನುಡಿ ರಕ್ಷಣೆಗಾಗಿ ಆರು ಮಹತ್ವದ ನಿರ್ಣಯಗಳು 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊರಬಿದ್ದವು.

ಗುಲ್ಬರ್ಗ ವಿಶ್ವವಿದ್ಯಾಲಯ ಆವರಣದಲ್ಲಿ ಶುಕ್ರವಾರ ಸಮ್ಮೇಳನದ ಸಮಾರೋಪ ಸಮಾರಂಭಕ್ಕೆ ಮುನ್ನ ನಡೆದ ಬಹಿರಂಗ ಅಧಿವೇಶನದಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಕಸಾಪ ಗೌರವ ಕಾರ್ಯದರ್ಶಿ ರಾಜಶೇಖರ ಹತಗುಂದಿ ನಿರ್ಣಯ ಮಂಡಿಸಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಾರದ ಹಿಂದಷ್ಟೇ ಗಡಿ ವಿಚಾರ ಸಂಬಂಧ ತಗಾದೆ ತೆಗೆದಿದ್ದರಲ್ಲದೆ, ಇಬ್ಬರು ಸಚಿವರಿಗೆ ಗಡಿ ವಿಚಾರ ನೋಡಿಕೊಳ್ಳುವ ಜವಾಬ್ದಾರಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಮ್ಮೇಳನದ ಠರಾವು ಮಹತ್ವ ಪಡೆದುಕೊಂಡಿದೆ.

ನೆರೆ ರಾಜ್ಯಗಳ ಕನ್ನಡ ಶಾಲೆ ಉಳಿಯಲಿ

ಆಂಧ್ರದ ಕನ್ನಡ ಶಾಲೆಗಳ ಸ್ಥಿತಿಗೂ ಸಮ್ಮೇಳನದಲ್ಲಿ ಕಳವಳ ವ್ಯಕ್ತವಾಯಿತು. ಆಂಧ್ರದ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಬೆಳವಣಿಗೆಯನ್ನು ಸಮ್ಮೇಳನ ತೀವ್ರವಾಗಿ ಖಂಡಿಸುತ್ತದೆ. ಆಂಧ್ರ ಮಾತ್ರವಲ್ಲ. ಇತರ ರಾಜ್ಯಗಳ ಗಡಿ ಪ್ರದೇಶಗಳಲ್ಲೂ ಕನ್ನಡ ಶಾಲೆ ಮುಚ್ಚದಂತೆ ಕ್ರಮಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net