ಗೋಷ್ಠಿ ಅಧ್ಯಕ್ಷರ ಭಾಷಣಕ್ಕೆ ಅಡ್ಡಿ, ಮಾನ್ಪಡೆ ಬಂಧನ: ತೊಗರಿಗೆ ಬೆಂಬಲ ಬೆಲೆ ವಿಷಯ ಪ್ರಸ್ತಾಪಿಸಿ ಗಲಾಟೆ

Manpade
Published on

ಕಲಬುರಗಿ ಡಾ.ಚೆನ್ನಣ್ಣ ವಾಲೀಕಾರ ವೇದಿಕೆ: ಕೃಷಿ ಮತ್ತು ನೀರಾವರಿ ಗೋಷ್ಠಿಯಲ್ಲಿ ರಾಜ್ಯ ಬೆಂಬಲ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ವಿಷಯ ಮಂಡಿಸುವಾಗ, ತೊಗರಿ ಬೆಂಬಲ ಬೆಲೆ ವಿಷಯದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ವಿರೋಧಿಸಿ ಪ್ರತಿಭಟನೆ ನಡೆಸಿ ಭಾಷಣಕ್ಕೆ ಅಡ್ಡಿಪಡಿಸಿದ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಅವರನ್ನು ಪೊಲೀಸರು ಬಂಧಿಸಿ ಕರೆದೊಯ್ದರು.

ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರಾಜ್ಯ ಸರ್ಕಾರ 45 ಕ್ವಿಂಟಾಲ್ ಭತ್ತ ಖರೀದಿಸುತ್ತಿದೆ. ಕೇವಲ 10 ಕ್ವಿಂಟಾಲ್ ತೊಗರಿ ಖರೀದಿಸುವ ಮೂಲಕ ಬೆಳೆಗಾರರಿಗೆ ಅನ್ಯಾಯ ಮಾಡುತ್ತಿದೆ. ನಮ್ಮ ಹೋರಾಟ ಸಮ್ಮೇಳನ ಅಥವಾ ಗೋಷ್ಠಿ ವಿರುದ್ಧವಲ್ಲ. ಕೃಷಿ ಬೆಂಬಲ ಬೆಲೆ ಆಯೋಗ ಅಧ್ಯಕ್ಷರ ವಿರುದ್ಧ ಮಾತ್ರ. ಹೀಗಾಗಿ ಅಧ್ಯಕ್ಷರು ಭಾಷಣ ಮುಂದುವರಿಸಬಾರದು ಎಂದು ಮಾನ್ಪಡೆ ಹೇಳಿದರು.

ಈ ಕುರಿತು ಸಮ್ಮೇಳನ ನಿರ್ಣಯದಲ್ಲಿ ಸೇರಿಸಲು ಆಗ್ರಹಿಸೋಣ. ಸರ್ಕಾರದ ಗಮನ ಸೆಳೆಯಲು ಹೋರಾಟ ನಡೆಸಲು ಹಲವು ಮಾರ್ಗಗಳಿವೆ. ಇದು ಸರಿಯಾದ ಮಾರ್ಗವಲ್ಲ. ಭಾಷಣ ಮುಂದುವರಿಸುತ್ತೇನೆಂದು ಬೆಳಗುರ್ಕಿ ವಿನಂತಿ ಮಾಡಿಕೊಂಡರು. ಗೋಷ್ಠಿಗೆ ಅಡ್ಡಿಪಡಿಸಿದ ಮಾನ್ಪಡೆ ಕ್ರಮಕ್ಕೆ ಪ್ರೇಕ್ಷಕರಿಂದ ಪರ ವಿರೋಧ ಕೇಳಿ ಬಂದಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net