85 ಸಾವಿರ ಕೋಟಿ ರೂ.ಎಸ್‌ಸಿಎಸ್‌ಪಿ,ಟಿಎಸ್‌ಪಿ ಅನುದಾನಕ್ಕೆ ಬಿಜೆಪಿ ಒತ್ತಾಯ

CTD -BJP
Published on

ಚಿತ್ರದುರ್ಗ: ಸಿದ್ದರಾಮಯ್ಯ ಸರ್ಕಾರದ ಕಳೆದ 2 ವರ್ಷಗಳ ಅವಧಿಯಲ್ಲಿ 25,426 ಕೋಟಿ ರೂ. ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ದುರ್ಬಳಕೆಯಾಗಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ಆರೋಪಿಸಿದರು.

ಸಂವಿಧಾನದ ಹಾಗೂ ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾನೂನು ಆಶಯಗಳ ವಿರುದ್ಧ ಅನ್ಯಉದ್ದೇಶಕ್ಕೆ ಅನುದಾನ ಬಳಸಿ ಎಸ್‌ಸಿ,ಎಸ್‌ಟಿ ಸಮುದಾಯಗಳಿಗೆ ರಾಜ್ಯ ಸರ್ಕಾರ ದ್ರೋಹ ಹಾಗೂ ಅಕ್ಷಮ್ಯ ಅಪರಾಧ ಎಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಪಕ್ಷ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸದನದಲ್ಲಿ ಅನುದಾನ ದುರ್ಬಳಕೆ ಕುರಿತು ಪ್ರಶ್ನಿಸಿದರೆ ಸಿಎಂ ಉಡಾಫೆ ಉತ್ತರ ಕೊಡುತ್ತಾರೆ ಎಂದರು.

ಶಿಕ್ಷಣ, ಮನೆ, ಭೂಮಿ ಖರೀದಿ ಇತ್ಯಾದಿ ಎಸ್‌ಸಿ,ಎಸ್‌ಟಿ ಸಮುದಾಯದ ಸಮಗ್ರ ಏಳಿಗೆಗೆ ಪ್ರತಿ ವರ್ಷ ಅನುದಾನ ಮೀಸಲಿಡ ಬೇಕಿದೆ. ಆದ್ದರಿಂದ ಮಾ.7ರಂದು ಸಿಎಂ ಮಂಡಿಸುವ 4 ಲಕ್ಷ ಕೋಟಿ ರೂ. ಮೊತ್ತದ ಬಜೆಟ್‌ನಲ್ಲಿ ಪ್ರಸಕ್ತ ಸಾಲಿನ 60 ಸಾವಿರ ಕೋಟಿ ರೂ. ಹಾ ಗೂ ದುರ್ಬಳಕೆಯಾಗಿರುವ 25 ಸಾವಿರ ಕೋಟಿ ರೂ. ಸಹಿತ 85 ಸಾವಿರ ಕೋಟಿ ರೂ.ಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಬುಡಕಟ್ಟು ಸಮುದಾಯ,ಅಲೆಮಾರಿ,ಅರೆಅಲೆಮಾರಿಗಳ ಅಭ್ಯುದಯಕ್ಕಾಗಿ ಮೀಸಲಿಡಬೇಕು ಹಾಗೂ ಈ ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಸುವುದಿಲ್ಲವೆಂದು ನಿರ್ಣಯಿಸುವಂತೆ ಒತ್ತಾಯಿಸಿ ಗುರುವಾರ ದುರ್ಗದಲ್ಲಿ ಪ್ರತಿಭಟಿಸಲಾಗುತ್ತಿದೆ ಎಂದರು.

ಇದೊಂದು ಅಭಿವೃದ್ಧಿ ಶೂನ್ಯ ಸರ್ಕಾರ. ರಾಜ್ಯದಲ್ಲಿ ಒಂದೇ ಒಂದು ರೂಪಾಯಿ ಅಭಿವೃದ್ಧಿ ಕೆಲಸಗ ಳಾಗುತ್ತಿಲ್ಲ. ಕೆಲವು ಕಾಮಗಾರಿಗಳು ಮಂದಗತಿಯಲ್ಲಿ ಸಾಗಿದ್ದರೆ, ಕೆಲವು ಕಾಮಗಾರಿಗಳಿಗೆ ಅನುದಾನವನ್ನೇ ಕೊಟ್ಟಿಲ್ಲ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. 50 ಹೆಣ್ಣಮಕ್ಕಳ ಮೇಲೆ ಅತ್ಯಾಚಾರ ನಡೆದು, ಅವರ ಕೊಲೆಯಾಗಿದೆ. 12 ಗುತ್ತಿಗೆದಾರ ರು, 10 ಸರ್ಕಾರಿ ಅಧಿಕಾರಿ, ನೌಕರರು ಹಾಗೂ 3400 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 700 ಬಾಣಂತಿಯರು ಸರ್ಕಾರಿ ಆಸ್ಪತ್ರೆಗ ಳಲ್ಲಿ ಅಸು ನೀಗಿದ್ದಾರೆ. 1100 ನವ ಜಾತ ಶಿಶುಗಳ ಮರಣವಾಗಿದೆ. 27ಗುತ್ತಿಗೆದಾರರು ಬಿಲ್‌ಬಾಕಿ ಪಾವತಿ ಮಾಡಿ ಇಲ್ಲವೇ ದಯಾಮ ರಣಕ್ಕೆ ಅನುಮತಿಕೊಡಿ ಎಂದು ರಾಜ್ಯಪಾಲರಿಗೆ ಮನವಿ ಮಾಡಿದ್ದು,ಈ ಸರ್ಕಾರ ಅಸಮರ್ಥವಾಗಿದೆ ಎಂದು ಸಂಸದರು ಕಿಡಿಕಾರಿದ ರು.

ಸಿದ್ದರಾಮಯ್ಯರ ದುರಾಳಿಡತ,ಅವರ ವೋಟ್ ಬ್ಯಾಂಕ್ ರಾಜಕಾರಣದಿಂದಾಗಿ ನೀರು,ಹಾಲು,ವಿದ್ಯುತ್ ಹಾಗೂ ನಿತ್ಯದ ಬಳಕೆ ವ ಸ್ತುಗಳು ದುಬಾರಿಯಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಂಸದರು,ಎಸ್‌ಸಿ ಎಸ್ ಪಿ,ಟಿಎಸ್‌ಪಿಗೆ ಅನುದಾನ ಕಾಯ್ದಿರಿಸಿದ್ದರೆ ರಾಜ್ಯಾ ದ್ಯಂತ ಹೋರಾಟ ತೀವ್ರವಾಗಲಿದೆ ಎಂದು ಎಚ್ಚರಿಸಿದರು.

ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರ್ಕಾರದ 10 ವರ್ಷದ ಅವಧಿ ಹಾಗೂ ನರೇಂದ್ರ ಮೋದಿ ನೇತೃತ್ವದ ಆಡಳಿತಾವಧಿ ಕ ರ್ನಾಟಕಕ್ಕೆ ಬಿಡುಗಡೆಯಾಗಿರುವ ಅನುದಾನದ ಕುರಿತು ಶ್ವೇತ ಪತ್ರ ಹೊರಡಿಸುವಂತೆ ಸಿಎಂಗೆ ಸವಾಲು ಹಾಕಿದರು. ನಿಯಮಾನುಸಾರ ಎಲ್ಲ ರಾಜ್ಯಗಳಿಗೂ ಅನುದಾನ ಹಂಚಿಕೆ ಮಾಡಲಾಗುತ್ತದೆ.

ಸಿಎಂ ಸುಳ್ಳು ಆಪಾದನೆ ಮಾಡುತ್ತಿದ್ದಾರೆ. ಬಿಜೆಪಿಗೆ ಹೆಸರು ಬರುತ್ತದೆಂಬ ಕಾರಣಕ್ಕೆ ಕೇಂದ್ರ,ರಾಜ್ಯಕ್ಕೆ ಕೊಟ್ಟಿರುವ 8.70 ಲಕ್ಷ ಮನೆ ಗ ಳ ನಿರ್ಮಾಣಕ್ಕೆ ಮುಂದಾಗಿಲ್ಲ. ದೇಶದ 110 ಹಿಂದುಳಿದ ಜಿಲ್ಲೆಗಳಿಗೆ ವಿಶೇಷ ಸೌಲಭ್ಯಗಳನ್ನು ಕೇಂದ್ರ ಒದಗಿಸಲಿದ್ದು,ಒಂದೇ ಒಂದು ಬೇಡಿಕೆಯನ್ನೂ ರಾಜ್ಯಸರ್ಕಾರ ಕೇಂದ್ರಕ್ಕೆ ಸಲ್ಲಿಸಿಲ್ಲ.

ಎಸ್‌ಸಿ,ಎಸ್‌ಟಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಒದಗಿಸಲು ನಮ್ಮ ಸರ್ಕಾರ ಅಗತ್ಯ ಕ್ರಮ ವಹಿಸಿತ್ತು. ಒಂದು ವೇಳೆ ನಮ್ಮ ಅವಧಿ ತದ್ವಿ ರು ದ್ಧ ಆದೇಶವಾಗಿದ್ದರೆ ನಾನು ಶಿಕ್ಷೆ ಅನುಭವಿಸಲು ಸಿದ್ಧ,ಹಿಂದಿನ ಸರ್ಕಾರ ಕಾಮಗಾರಿಗಳಿಗೆ ಬೇಕಾಬಿಟ್ಟಿ ಅನುದಾನ ಕೊಟ್ಟಿದೆ ಎಂದು ಆ ರೋಪಿಸುವ ಬದಲು ಅದಕ್ಕೂ ಪ್ರತ್ಯೇಕ ಶ್ವೇತ ಪತ್ರ ಹೊರಡಿಸುವಂತೆ ಸಿದ್ದರಾಮಯ್ಯರನ್ನು ಆಗ್ರಹಿಸಿದರು. ಜನರು ತಮ್ಮ ಕಾಲ ಮೇಲೆ ತಾವು ನಿಲ್ಲುವಂಥ ಯೋಜನೆಗಳನ್ನು ಸರ್ಕಾರಗಳು ರೂಪಿಸಬೇಕೆಂದು ಕಾರಜೋಳ ಅಭಿಪ್ರಾಯಪಟ್ಟರು.

ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಅಂಬಿಕಾ ಹುಲಿನಾಯ್ಕರ್, ಎ. ಮುರುಳಿ, ಎಸ್.ಲಿಂಗಮೂರ್ತಿ, ಕೆ.ಟಿ.ಕುಮಾರಸ್ವಾಮಿ,ಬಾಳೆಕಾಯಿ ರಾಮದಾಸ್, ಪಾಪೇಶ್‌ನಾಯಕ, ಜಯಪಾಲಯ್ಯ, ಶಿವಣ್ಣ, ತಿಪ್ಪೇಸ್ವಾಮಿ, ಮಾಧುರಿ ಗಿರೀಶ್, ಸಂಪತ್‌ಕುಮಾರ್, ಮೋಹನ್, ಛಲವಾದಿ ತಿಪ್ಪೇಸ್ವಾಮಿ, ಡಿ.ಒ. ಮೊರಾರ್ಜಿ, ನಾಗರಾಜ್‌ಬೇದ್ರೆ, ದಗ್ಗೆ ಶಿವಪ್ರಕಾಶ್ ಇತರರು ಇದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net