85 ಪ್ರಕರಣ, 21,250 ರೂಪಾಯಿ ದಂಡ ಪಾವತಿಸಿದ ಬೈಕ್ ಸವಾರ

12 Dwd 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳ ರಿಯಾಯಿತಿ ದಂಡ ಪಾವತಿಯ ಕೊನೆಯ ದಿನವಾಗಿದ್ದ ಶುಕ್ರವಾರ ವಾಹನಗಳ ಮಾಲೀಕರು ಸಂಚಾರ ಠಾಣೆಗೆ ಮುಗಿಬಿದ್ದಿದ್ದರು.

ನಗರದ ವಸೀಂ ಕಿತ್ತೂರ ಎಂಬುವರ ವಾಹನದ ಮೇಲೆ 85 ಪ್ರಕರಣಗಳು ದಾಖಲಾಗಿದ್ದವು. ಸಂಚಾರ ಠಾಣೆಗೆ ಆಗಮಿಸಿದ ಅವರು, ಸಂಚಾರ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ ಮೇಟಿ ಅವರನ್ನು ಭೇಟಿ ಮಾಡಿ 21,250 ರೂಪಾಯಿ ದಂಡ ಪಾವತಿಸಿದರು.

ನಗರದ ಗುಲಗಂಜಿಕೊಪ್ಪ ನಿವಾಸಿ ಲಿಯಾಕತ್‌ಅಲಿ ಶಿರೂರ ಎಂಬುವರ ಬೈಕ್ ಮೇಲೆ 39 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದವು. ಬಹುತೇಕ ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ ಮಾಡಿ ನಿಯಮ ಉಲ್ಲಂಘಿಸಿದ್ದು ಒಂದೇ ಕ್ಯಾಮರಾದಲ್ಲಿ ದಾಖಲಾಗಿತ್ತು. ಸಂಚಾರ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ ಮೇಟಿ ಅವರ ಮಾರ್ಗದರ್ಶನದಲ್ಲಿ ಎಎಸ್‌ಐ ಪ್ರಕಾಶ ಸೋಗಿ, ವಿಠ್ಠಲ ಮಾಯಣ್ಣವರ ಹಾಗೂ ನಾಗರಾಜ ಕಾಲವಾಡ ರಿಯಾಯತಿ ದಂಡವನ್ನು ಪಾವತಿಸಿಕೊಂಡರು.

ಇದೇವೇಳೆ ಅರುಣ ಕಲ್ಲೋಳಿಕರ ಎಂಬುವರು ಶುಕ್ರವಾರ ಸಂಚಾರ ಠಾಣೆಗೆ ತೆರಳಿ, ದ್ವಿಚಕ್ರ ವಾಹನದ ಮೇಲೆ ದಾಖಲಾಗಿದ್ದ 24 ಪ್ರಕರಣಗಳ 6 ಸಾವಿರ ರೂಪಾಯಿ ದಂಡ ಪಾವತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net