84 ಕೋಟಿ ರೂ.ನೀರು ಯೋಜನೆಗೆ ಚಾಲನೆ ಶೀಘ್ರ

Prabhu Chavan
Published on

ಔರಾದ್: ಅಮೃತ ಯೋಜನೆಯಡಿ ಔರಾದ್(ಬಿ) ಪಟ್ಟಣ, ಕಮಲನಗರ ಹಾಗೂ ಆರು ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಕಲ್ಪಿಸುವ ೮೪.೮೨ ಕೋಟಿ ರೂ. ಯೋಜನೆಗೆ ಶೀಘ್ರ ಚಾಲನೆ ನೀಡುವುದಾಗಿ ಶಾಸಕ ಪ್ರಭು ಚವ್ಹಾಣ್ ತಿಳಿಸಿದ್ದಾರೆ. ಔರಾದ್(ಬಿ) ಕ್ಷೇತ್ರದಲ್ಲಿ ಪ್ರತಿವರ್ಷ ಎದುರಾಗುವ ನೀರಿನ ಸಮಸ್ಯೆಗೆ ಶಾಶ್ವತವಾಗಿ ಪರಿಹರಿಸುವ ಉದ್ದೇಶವಿದ್ದು, ೨೦೦ ಕೋಟಿಗೂ ಅಧಿಕ ಮೊತ್ತದಲ್ಲಿ ಜಲಜೀವನ ಮಿಷನ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದಿದ್ದಾರೆ.

ಸಚಿವನಾಗಿದ್ದಾಗ ಮುಖ್ಯಮಂತ್ರಿ ಮತ್ತು ಸಂಬAಧಿಸಿದ ಸಚಿವರ ಮೇಲೆ ಒತ್ತಡ ಹೇರಿ ಕ್ಷೇತ್ರಕ್ಕೆ ನೀರು ಪೂರೈಸುವ ೮೪.೮೨ ಕೋಟಿ ಯೋಜನೆಗೆ ಅನುಮೋದನೆ ಪಡೆದಿದ್ದೆ. ಚುನಾವಣೆ ಕಾರಣದಿಂದ ಕೆಲಸ ವಿಳಂಬವಾಗಿತ್ತು. ಇದೀಗ ಟೆಂಡರ್ ಹಂತದಲ್ಲಿದ್ದು, ಶೀಘ್ರ ಕಾಮಗಾರಿಗೆ ಚಾಲನೆ ಸಿಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿz್ದÁರೆ. ಈ ಯೋಜನೆಯಡಿ ಔರಾದ್ (ಬಿ) ಪಟ್ಟಣ, ಕಮಲನಗರ ಹಾಗೂ ೬ ಗ್ರಾಮಗಳಿಗೆ ಕಾರಂಜಾ ಜಲಾಶಯದಿಂದ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡುವುದರಿಂದ ಯೋಜನೆ ವ್ಯಾಪ್ತಿಯಲ್ಲಿ ವರ್ಷವಿಡೀ ಕುಡಿಯುವ ನೀರು ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net