8343 ಕೋಟಿ ರೂ. ವಾರ್ಷಿಕ ಸಾಲ ಯೋಜನೆ ಪುಸ್ತಕ ಬಿಡುಗಡೆ

3005Klb15
Published on

ಕಲಬುರಗಿ: ಜಿಲ್ಲೆಯ 2020-21ರ ಒಟ್ಟು 8343 ಕೋಟಿ ರೂ. ವಾರ್ಷಿಕ ಸಾಲ ಯೋಜನೆಯ ಹೊತ್ತಿಗೆಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜಾ ಅವರು ಬಿಡುಗಡೆ ಮಾಡಿದರು.
ಲೀಡ್ ಬ್ಯಾಂಕ್ (ಎಸ್.ಬಿ.ಐ.) ಸಿದ್ದಪಡಿಸಿರುವ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿದ ಅವರು, ಜಿಲ್ಲೆಯ ಒಟ್ಟು ಸಾಲ ಯೋಜನೆ 8343 ಕೋಟಿ ರೂ. ರಲ್ಲಿ ಆದ್ಯತಾ ವಲಯಕ್ಕೆ 6880 ಕೋಟಿ ರೂ. ಮೀಸಲಿಡಲಾಗಿದೆ. ಈ ಪೈಕಿ ಆದ್ಯತಾ ವಲಯದ ಸಾಲದಲ್ಲಿ ಕೃಷಿಗೆ 4831 ಕೋಟಿ ಸಿಂಹಪಾಲು ದೊರೆತಿದೆ. ಉಳಿದಂತೆ ಸಣ್ಣ ಮತ್ತು ಮಧ್ಯಮ ವ್ಯಾಪಾರಕ್ಕೆ 1260 ಕೋಟಿ, ಇತರೆ ಆದ್ಯತಾ ವಲಯಕ್ಕೆ 789 ಕೋಟಿ ರೂ.ನೀಡಲಾಗಿದೆ. ಹಾಗೂ ಇತರೆ ವಲಯಕ್ಕೆ 1463 ಕೋಟಿ ರೂ. ಮೀಸಲಿಡಲಾಗಿದೆ ಎಂದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಾಯಕ ಮಹಾಪ್ರಬಂಧಕ ಪ್ರದೀಪಕುಮಾರ, ಕರ್ನಾಟಕ ಗ್ರಾಮೀಣ ಬ್ಯಾಂಕಿನ ಸಹಾಯಕ ಮಹಾ ಪ್ರಬಂಧಕರಾದ ಸಿದ್ದೇಶಪ್ಪ, ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ (ನಬಾರ್ಡ ) ರಮೇಶ ಭಟ್, ಲೀಡ್ ಬ್ಯಾಂಕ್ ಎಜಿಎಮ್ ಇಂತಿಸಾರ್ ಹುಸೇನ್, ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಸಿ.ಎ. ಹವಾಲ್ದಾರ್, ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಮಾಣಿಕ ರಘೋಜಿ ಉಪಸ್ಥಿತರಿದ್ದರು. ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net