82 ಅಡಿಗೆ ತಲುಪಿದ ಕೆ.ಆರ್.ಸಾಗರ

24-05--KRS1 (2)
Published on

ಕೆ.ಆರ್.ಸಾಗರ: ಇಲ್ಲಿನ ಕೃಷ್ಣರಾಜಸಾಗರ ಜಲಾಶಯದ ಅಣೆಕಟ್ಟೆ ನೀರಿನ ಮಟ್ಟ 82 (ಗರಿಷ್ಠ 124.80 ಅಡಿ) ಅಡಿಗೆ ತಲುಪಿದ್ದು, 5 ವರ್ಷಗಳ ನಂತರ ಗಣನೀಯವಾಗಿ ಕುಸಿತ ಕಂಡಿದೆ. ಪ್ರಸ್ತುತ ಜಲಾಶಯದಲ್ಲಿ ಒಳಹರಿವು 583 ಕ್ಯೂಸೆಕ್, ಹೊರಹರಿವು 3987 ಕ್ಯೂಸೆಕ್ ಇದ್ದು, 11.387 (ಗರಿಷ್ಠ 49.454) ಟಿಎಂಸಿ ನೀರಿನ ಸಂಗ್ರಹವಿದೆ.

ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ 104.07 ಅಡಿ ನೀರಿನ ಸಂಗ್ರಹವಿತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಸುಮಾರು 22 ಅಡಿ ನೀರಿನ ಸಂಗ್ರಹ ಕಡಿಮೆ ಇದ್ದು, ಡೆಡ್ ಸ್ಟೋರೆಜ್ ತಲುಪಲು ಕೇವಲ 7 ಟಿಎಂಸಿ (60 ಅಡಿಗೆ ಕುಸಿದರೆ) ಪ್ರಮಾಣ ಬಾಕಿ ಇದೆ. ವಾಡಿಕೆಯಂತೆ ಮುಂಗಾರು ಮೇ ಕೊನೆಯ ವಾರ ಅಥವಾ ಜೂನ್ ತಿಂಗಳ ಮೊದಲ ವಾರದಲ್ಲಿ ಪ್ರಾರಂಭವಾಗದಿದ್ದರೆ ನೀರಿಗೆ ತೀವ್ರ ಅಭಾವ ಸೃಷ್ಟಿಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net