

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ಬಂಜಾರ ಕಾಲನಿಯಲ್ಲಿ ಕುಟುಂಬದವರು ಊರಿಗೆ ಹೋದಾಗ ಕಳ್ಳರು ಅಲ್ಮೇರಾದ ಸೇಫ್ ಲಾಕರ್‌ನಲ್ಲಿಟ್ಟಿದ್ದ 4.10 ಲಕ್ಷ ರೂ. ಮೌಲ್ಯದ 82 ಗ್ರಾಂ ಚಿನ್ನಾಭರಣ ಹಾಗೂ 10 ಸಾವಿರ ರೂ. ನಗದು ಕಳವು ಮಾಡಿದ್ದಾರೆ.
ಶಾಲುಬಾಯಿ ರಾಠೋಡ ಎಂಬುವವರು ಜು. 6ರಿಂದ 13ರವರೆಗೆ ಮನೆಗೆ ಕೀಲಿ ಹಾಕಿಕೊಂಡು ಹೋಗಿದ್ದಾಗ ಕಳವಾಗಿದೆ. ಗೋಕುಲ ರೋಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.