801 ಸಿಬ್ಬಂದಿ ನಿಯೋಜನೆ

25arsph1ep
ಅರಸೀಕೆರೆ ನಗರದ ಸಂತಮೇರಿ ಪ್ರೌಢಶಾಲಾ ಆವರಣದಲ್ಲಿ ಮತಗಟ್ಟೆಗಳಿಗೆ ತೆರಳಲು ಸಜ್ಜಾಗಿರುವ ಕೆಎಎಸ್‌ಆರ್‌ಟಿಸಿ ಬಸ್ ಹಾಗೂ ಸಿಬ್ಬಂದಿ.
Published on

ಅರಸೀಕೆರೆ: ಲೋಕಸಭಾ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇದಕ್ಕಾಗಿ ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ 267 ಮತಗಟ್ಟೆ ತೆರೆಯಲಾಗಿದ್ದು ಪ್ರತಿ ಮತಗಟ್ಟೆಗೆ ತಲಾ ಮೂವರಂತೆ 801 ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಈ ಪೈಕಿ 84 ಕ್ರಿಟಿಕಲ್ ಮತಗಟ್ಟೆಗಳಿವೆ.

ಕ್ಷೇತ್ರ ವ್ಯಾಪ್ತಿಯಲ್ಲಿ ಐದು ಪಿಂಕ್ ಬೂತ್ ತೆರೆಲಾಗಿದೆ. ನಲವತ್ತು ಕೆಎಎಸ್‌ಆರ್‌ಟಿಸಿ ಬಸ್, ತಲಾ ಹತ್ತು ಮಿನಿಬಸ್, ಜೀಪ್‌ಗಳನ್ನು ಸೇವೆಗೆ ಪಡೆಯಲಾಗಿದೆ.

10,8478 ಪುರುಷ, 110714 ಹಾಗೂ ಇತರ ನಾಲ್ಕು ಸೇರಿದಂತೆ ಒಟ್ಟಾರೆ 219196 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಶಾಂತಿಯುತ ಮತದಾನಕ್ಕಾಗಿ ಆರಕ್ಷಕ ಇಲಾಖೆ ಒಬ್ಬ ಡಿವೈಎಸ್‌ಪಿ, ನಾಲ್ವರು ಸಿಪಿಐ, ಹತ್ತು ಪಿಎಸ್‌ಐ ಐನೂರು ಪೊಲೀಸ್ ಹೆಡ್ ಕಾನ್‌ಸ್ಟೆಬಲ್, ಐವತ್ತು ಅರಸೇನಾಪಡೆ ಒಳಗೊಂಡಂತೆ ಹಾಗೂ ಗೃಹರಕ್ಷಕ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನೇಮಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net