ದಾಖಲೆಯಿಲ್ಲದೆ ಸಾಗಿಸುತ್ತಿದ್ದ 80 ಸಾವಿರ ರೂ. ಪತ್ತೆ

h2-amount
Published on

ಹುಬ್ಬಳ್ಳಿ: ಇಲ್ಲಿಯ ಗಬ್ಬೂರು ಚೆಕ್ ಪೋಸ್ಟ್‌ನಲ್ಲಿ ಮಂಗಳವಾರ ವಾಹನ ತಪಾಸಣೆ ಮಾಡುವ ವೇಳೆ ಕಾರ್‌ನಲ್ಲಿ 80 ಸಾವಿರ ರೂ. ನಗದು ಪತ್ತೆಯಾಗಿದೆ.
ಚನ್ನಗಿರಿಯಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಮಾರುತಿ ಸುಜೂಕಿ ಸೆಲೆರಿಯೋ ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದ ಚನ್ನಗಿರಿಯ ಪೂರ್ಣಿಮಾ ಎಸ್. ಅವರ ಹತ್ತಿರವಿದ್ದ ಬ್ಯಾಗ್‌ನಲ್ಲಿ ನಗದು ಪತ್ತೆಯಾಗಿದೆ. ದಾಖಲೆಯಿಲ್ಲದ್ದರಿಂದ ಹಣವನ್ನು ಖಜಾನೆ ಇಲಾಖೆಗೆ ಜಮಾ ಮಾಡಲಾಗಿದೆ ಎಂದು ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net