

ವಾದಿರಾಜ ವ್ಯಾಸಮುದ್ರ ಕಲಬುರಗಿ
ಶಾಸಕ ದತ್ತಾತ್ರೇಯ ಪಾಟೀಲ್ ಅವರ ಜನ್ಮದಿನವನ್ನು ವೈಶಿಷ್ಠೃಪೂರ್ಣವಾಗಿ ಆಚರಿಸಲು ನಿರ್ಧರಿಸಿರುವ ದಿ. ಚಂದ್ರಶೇಖರ ಪಾಟೀಲ್ ರೇವೂರ್ ಅಭಿಮಾನಿಗಳ ಬಳಗ ಅದಕ್ಕಾಗಿ ಬೃಹತ್ ಉದ್ಯೋಗ ಮೇಳಕ್ಕೆ ಸಿದ್ಧತೆ ನಡೆಸಿದ್ದಾರೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳ ನಿರುದ್ಯೋಗಿ ಯುವಕರಿಗೆ ಅರ್ಹ ಉದ್ಯೋಗ ದೊರಕಿಸಿಕೊಡುವ ಉದ್ದೇಶ ಅವರದ್ದಾಗಿದೆ.
ಕೇಕ್ ಕಟ್ ಮಾಡಿ ಜನ್ಮದಿನವನ್ನು ಆಚರಿಸಿಕೊಳ್ಳುವುದರ ಬದಲು, ಸಾಮಾಜಿಕವಾಗಿ ಒಂದಿಷ್ಟು ಜನಕ್ಕೆ ಸಹಾಯ ಆಗಬೇಕು ಎನ್ನುವುದಕ್ಕಾಗಿ ಉದ್ಯೋಗ ಮೇಳ ನಡೆಯಲಿದೆ ಎಂದು ಅಭಿಮಾನಿಗಳ ಬಳಗದ ಅಧ್ಯಕ್ಷ ಅಪ್ಪು ಕಣಕಿ ತಿಳಿಸಿದ್ದಾರೆ.
27ರಂದು ದತ್ತಾತ್ರೇಯ ಪಾಟೀಲ್ ರೇವೂರ್ ಅವರ ಜನ್ಮದಿನ. ಅದೇ ದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರ ಜನ್ಮದಿನವೂ ಆಗಿದ್ದು, ಆ ದಿನ ಬೆಂಗಳೂರಿನಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಂತೆಯೇ ಉದ್ಯೋಗ ಮೇಳವನ್ನು ಒಂದು ದಿನ ಮುಂದೂಡಿ 28ರಂದು ಇಲ್ಲಿಯ ಎನ್. ವಿ. ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ 150 ಪ್ರತಿಷ್ಠಿತ ಕಂಪನಿಗಳು ಮುಂದೆ ಬಂದಿವೆ. ಈ ಕಂಪನಿಗಳಿಗೆ ಏನಿಲ್ಲವೆಂದರೂ ಒಂಬತ್ತು ಸಾವಿರ ಯುವಕರು ವಿವಿಧ ಸ್ತರಗಳಲ್ಲಿ ಬೇಕಾಗಿದ್ದಾರೆ. ಹೀಗಾಗಿ ಉದ್ಯೋಗ ಮೇಳ ನಿರುದ್ಯೋಗಿ ಯುವಕರಿಗೆ ಹೊಸ ಆಶಾಭಾವನೆ ಮೂಡಿಸಿದರೆ ಕಂಪನಿಗಳಿಗೂ ಅನುಕೂಲವಾಗಲಿದೆ.
ಎನ್. ವಿ. ಮೈದಾನದಲ್ಲಿ ಒಟ್ಟು 150 ಸ್ಟಾಲ್ಗಳನ್ನು ಸಧ್ಯಕ್ಕೆ ಹಾಕಲಾಗುತ್ತಿದೆ. ಉದ್ಯೋಗ ಮೇಳಕ್ಕೆ ಆನ್-ಲೈನ್ ಮೂಲಕ ಈಗಾಗಲೇ ಎಂಟು ಸಾವಿರ ಯುವಕರು ಹೆಸರು ನೋಂದಾಯಿಸಿದ್ದು, ಇನ್ನೂ ಸುಮಾರು ಹದಿನೈದು ಸಾವಿರ ಹೆಸರುಗಳು ನೋಂದಣಿಯಾಗಬಹುದೆಂದು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. (ಡಿಡಿಡಿ.ಚಿಜಿಠಿ.್ಝಢ/ಛ್ಚಟಚಠಿಜ್ಝಿ) ಈ ವೆಬ್ಗೆ ಅಜರ್ಿ ಸಲ್ಲಿಸಬಹುದಾಗಿದೆ.
ಉದ್ಯೋಗ ಮೇಳದಲ್ಲಿ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಿಗೆ ಪ್ರಾಧಾನ್ಯತೆ ನೀಡಲಾಗುವುದು. ಅದರಲ್ಲಿ ವಿಶೇಷವಾಗಿ ಕಲಬುರಗಿ ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ಉದ್ಯೋಗ ಮೇಳಕ್ಕೆ ಸಂಬಂಧಿಸಿದಂತೆ ಎಲ್ಲ ಕಡೆ ಪ್ರಚಾರ ಮಾಡಲಾಗುತ್ತಿದೆ.
ಮೇಳ ಯಶಸ್ಸಿಗೆ 250 ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 500 ಯುವಕರ ತಂಡ ಎಲ್ಲ ಸಿದ್ಧತೆಗಳಲ್ಲಿ ತೊಡಗಿದೆ. ನಿರುದ್ಯೋಗಿ ಯುವಕರಿಗೆ ಮಾಹಿತಿ ನೀಡುವುದು ಸೇರಿ ಎಲ್ಲ ವಿವರಗಳನ್ನು ಈ ತಂಡದವರು ಕೊಡುತ್ತಿದ್ದಾರೆ.
ಮೇಳದಲ್ಲಿ ಪಾಲ್ಗೊಳ್ಳುವ ಯುವಕರು ಸಂದರ್ಶನವನ್ನು ಹೇಗೆ ಎದುರಿಸಬೇಕು ಎನ್ನುವುದರ ಕುರಿತಂತೆಯೂ ಮಾಹಿತಿ ನೀಡಲಾಗುತ್ತಿದೆ. ಎಸ್ಎಸ್ಎಲ್ಸಿ ಮತ್ತು ನಂತರದ ಉನ್ನತ ತರಗತಿಗಳಲ್ಲಿ ಉತ್ತೀರ್ಣರಾಗಿರುವ (ಎಲ್ಲ ವೃತ್ತಿಪರ ಕೋರ್ಸ್ಗಳು ಸೇರಿ) ಅರ್ಹರ ಸಂದರ್ಶನ ನಡೆಯಲಿದ್ದು, ಸ್ಥಳದಲ್ಲಿಯೇ ನೇಮಕಾತಿ ಪತ್ರ ನೀಡುವ ಸಾಧ್ಯತೆಗಳೂ ಸಹ ಇವೆ. ಒಟ್ಟಾರೆ ಶಾಸಕರ ಜನ್ಮದಿನ ನಿರುದ್ಯೋಗಿ ಯುವಕರಿಗೆ ಹೊಸ ಚೈತನ್ಯವನ್ನು ತುಂಬಲಿದೆ.