

ಬೀದರ್: ಇಲ್ಲಿಯ ವೈಷ್ಣವಿ ಕನ್ವೆನ್ಶನ್ ಹಾಲ್‍ನಲ್ಲಿ ಆಯೋಜಿಸಿದ್ದ ಪಂಚಗವ್ಯ ಶಿಬಿರದಲ್ಲಿ 80 ಜನರ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು. ಕ್ಯಾನ್ಸರ್ ತಜ್ಞ ಡಾ. ಡಿ.ಪಿ. ರಮೇಶ ಅವರು ತಪಾಸಣೆ ನಡೆಸಿದರು. ಅವಶ್ಯಕತೆ ಇರುವವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಗೆ ಸಲಹೆ ನೀಡಿದರು.
ಶಿಬಿರದಲ್ಲಿ ರುಮಾಟಾ ಅರ್ಥೈಟಿಸ್, ಅಸ್ತಮಾ, ಪಿಸಿಒಡಿ, ಬುದ್ಧಿ ಮಾಂದ್ಯತೆ, ರಕ್ತದೊತ್ತಡ, ಮಧುಮೇಹ, ಸೋರಿಯಾಸಿಸ್, ಚರ್ಮರೋಗ, ಮರೆವು, ಕರುಳು, ಜಠರದ ಸಮಸ್ಯೆ, ಪೈಲ್ಸ್, ಪಿಸ್ತುಲಾ, ಸೈನೋಸೈಟಿಸ್, ಮೈಗ್ರೇನ್ ಅಲ್ಸರೆಟಿವ್ ಕೊಲೈಟಿಸ್, ಅಲರ್ಜಿ, ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್, ಗರ್ಭ ಕೊರಳಿನ ಕ್ಯಾನ್ಸರ್, ದೊಡ್ಡ ಕರುಳಿನ ಕ್ಯಾನ್ಸರ್, ಪ್ರೊಸ್ಟೆಡ್ ಕ್ಯಾನ್ಸರ್, ಮೂತ್ರ ಚೀಲದ ಕ್ಯಾನ್ಸರ್, ರಕ್ತದ ಕ್ಯಾನ್ಸರ್, ಮೆದುಳಿನ ಕ್ಯಾನ್ಸರ್, ಗುದನಾಳ ಕ್ಯಾನ್ಸರ್ ತಪಾಸಣೆ ಮಾಡಲಾಯಿತು.
ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಜೈ ಹಿಂದ್ ಹಿರಿಯ ನಾಗರಿಕರ ಸಂಘದ ಗೌರವಾಧ್ಯಕ್ಷ ದೇವೇಂದ್ರ ಕಮಲ್, ಕಾರ್ಯದರ್ಶಿ ವೀರಭದ್ರಪ್ಪ ಉಪ್ಪಿನ್, ಶ್ರೀಕಾಂತ ಮೋದಿ, , ಚನ್ನಬಸವಂತರೆಡ್ಡಿ ಇದ್ದರು. ಗೋ ಸೇವಾ ಗತಿ ವಿಧಿ ಕರ್ನಾಟಕ ಉತ್ತರ ಪ್ರಾಂತ, ಸ್ವಾವಲಂಬಿ ಭಾರತ ಅಭಿಯಾನ ಹಾಗೂ ಜೈ ಹಿಂದ್ ಹಿರಿಯ ನಾಗರಿಕರ ವೇದಿಕೆ ವತಿಯಿಂದ ಶಿಬಿರ ಹಮ್ಮಿಕೊಳ್ಳಲಾಗಿತ್ತು.