

ಹೊಸಕೋಟೆ: ದೇಶದಲ್ಲಿ ಶೇ.20 ಸಂಟಿತ ಕಾರ್ಮಿಕರಿದ್ದು, ಶೇ80 ಅಸಂಟಿತ ಕಾರ್ಮಿಕರಿದ್ದಾರೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಕಾರ್ಮಿಕ ಇಲಾಖೆಯಿಂದ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಲಾನುಭವಿಗಳಿಗೆ ಕಿಟ್ ವಿತರಿಸಿ ಮಾತನಾಡಿದರು.
ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಅನನ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಮಿಕರ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಪ್ರಮುಖವಾಗಿ ಪಿಂಚಣಿ ಸೌಲಭ್ಯ, ಕುಟುಂಬ ಪಿಂಚಣಿ ಸೌಲಭ್ಯ ಟೂಲ್ ಕಿಟ್ ಸೌಲಭ್ಯ, ಮಹಿಳೆಯರಿಗೆ ಹೆರಿಗೆ ಸೌಲಭ್ಯ, ವಿವಾಹ ಹಾಗೂ ಅಂತ್ಯಕ್ರಿಯೆ ವೆಚ್ಚ, ಶೈಕ್ಷಣಿಕ ಸಹಾಯಧನ ವೈದ್ಯಕಿಯ ಸಹಾಯಧನ ಅಪಘಾತ ಪರಿಹಾರ, ಸೇರಿ ಹಲವಾರು ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ನೋಂದಾಯಿತ ಕಟ್ಟಡ ಕಾರ್ಮಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಬಿಎಂಆರ್ಡಿಎ ಸದಸ್ಯ ಡಾ.ಎಚ್.ಎಂ.ಸುಬ್ಬರಾಜ್ ಮಾತನಾಡಿ, ಕೇಂದ್ರದಲ್ಲಿ ಮಲ್ಲಿಕಾರ್ಜುನ ರ್ಖಗೆ, ರಾಜ್ಯದಲ್ಲಿ ಬಿ.ಎನ್.ಬಚ್ಚೇಗೌಡರು ಕಾರ್ಮಿಕ ಸಚಿವರಾಗಿದ್ದ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಗೆ ಹೊಸ ಕಾಯಕಲ್ಪ ಕೊಟ್ಟರು. ಸಣ್ಣ ಕೈಗಾರಿಕಾ ವಲಯದ ಕಾರ್ಮಿಕರ ಅಭ್ಯುದಯಕ್ಕೆ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅದರ ಪರಿಣಾಮವಾಗಿಯೇ ರಾಜ್ಯದಲ್ಲಿ ಅಸಂಟಿತ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಧಕ್ಕುತ್ತಿದೆ ಎಂದರು.
ಪತ್ರಿಕಾ ವಿತರಕರು, ಪತ್ರಕರ್ತರಿಗೆ ಸೌಲಭ್ಯ: ಅಸಂಟಿತ ಕಾರ್ಮಿಕ ವಲಯಕ್ಕೆ ಪತ್ರಿಕಾ ವಿತರಕರು, ಪತ್ರಕರ್ತರು, ಡೆಲಿವರಿ ಬಾಯ್ಗಳನ್ನು ಸಹ ಸೇರಿಸಲಾಗಿದ್ದು, ಗುರುತಿನ ಚೀಟಿಗಳನ್ನು ನೀಡುವುದರ ಮೂಲಕ ಅಂಟಿತ ಕಾರ್ಮಿಕರಾಗಿ ನೋಂದಣಿ ಮಾಡಿಕೊಂಡು ಕಾರ್ಮಿಕ ಇಲಾಖೆಯ ಸವಲತ್ತುಗಳನ್ನು ಪಡೆಯಬಹುದಾಗಿದೆ ಎಂದು ತಾಲೂಕು ಕಾರ್ಮಿಕ ಕಲ್ಯಾಣ ಅಧಿಕಾರಿ ಯತೀಶ್ ತಿಳಿಸಿದರು.
ತಹಸೀಲ್ದಾರ್ ಸೋಮಶೇಖರ್, ತಾಪಂ ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಚೊಕ್ಕಹಳ್ಳಿ&ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದ ಅಧ್ಯಕ್ಷ ಕೃಷ್ಣಪ್ಪ, ವಕ್ಫ್ ಬೋರ್ಡ್ ಮಾಜಿ ಅದ್ಯಕ್ಷ ನಿಸಾರ್ ಅಹಮದ್, ಜೈ ಮಾರುತಿ ಕಟ್ಟಡ ಕಾರ್ಮಿಕರ ೇಮಾಭಿವೃದ್ಧಿ ಸಂದ ಅಧ್ಯಕ್ಷ ಗೊಟ್ಟಿಪುರ ಚಂದ್ರು, ಮುಖಂಡರಾದ ಬಚ್ಚಣ್ಣ, ನಯಾಜ್, ಆರ್ಟಿಸಿ ಗೋವಿಂದರಾಜ್, ಹಲಸಹಳ್ಳಿ ರವಿರಾಜ್ ಇದ್ದರು.
ತಾಲೂಕಿನಲ್ಲಿ 17 ಸಾವಿರ ಅಸಂಟಿತ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದು, ಕಟ್ಟಡ ಕಾರ್ಮಿಕರಿಗೆ 120 ಮೆಸಿನ್ ಕಿಟ್, 20 ಎಲೆಕ್ಟ್ರಿಷಿಯನ್ ಕಿಟ್, ರಸ್ತೆ ಕಾಮಗಾರಿ ಕಾರ್ಮಿಕರಿಗೆ 20 ಕಿಟ್, ಕಾರ್ಮಿಕರ ಆರೋಗ್ಯ ಸುಧಾರಣೆಗೆ ಪೌಷ್ಟಿಕಾಂಶಯುಕ್ತ 4 ಸಾವಿರ ನ್ಯೂಟ್ರಿಷನ್ ಕಿಟ್ ಸಹ ವಿತರಣೆ ಮಾಡಲಾಗುತ್ತಿದೆ.
ಯತೀಶ್ತಾಲೂಕು ಕಾರ್ಮಿಕ ಕಲ್ಯಾಣ ಅಧಿಕಾರಿ