8 ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ

CTD 4 STRIKE ATTI---03
Published on

ಚಿತ್ರದುರ್ಗ: ಸೇವೆ ಕಾಯಂಗೆ ಒತ್ತಾಯಿಸಿ ಕಳೆದ 12 ದಿನಗಳಿಂದ ನಗರದ ಡಿಸಿ ಕಚೇರಿ ಬಳಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು, ಡಿ.8ರಿಂದ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಅಮರಣಾಂತ ಉಪವಾಸ ಸತ್ಯಾ ಗ್ರಹ ನಡೆಸಲಿದ್ದಾರೆ ಎಂದು ರಾಜ್ಯಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ.ಹನುಮಂತ ಆರ್.ಕಲ್ಮನಿ ಹೇಳಿದರು.
ನಗರದಲ್ಲಿ ಸೋಮವಾರ ಮುಷ್ಕರ ನಿರತರನ್ನು ಉದ್ದೇಶಿಸಿ ಮಾತನಾಡಿದ ಅವರು, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅ ವರು ಬೇಡಿಕೆಗಳ ಕುರಿತು ಚರ್ಚಿಸಿದ್ದರೂ, ಕೇವಲ ಬಾಯಿ ಮಾತಿನ ಭರವಸೆ ನೀಡಿದ್ದಾರೆ. ಇದರಿಂದ ನಮ್ಮಗಳ ಸಂಕಷ್ಟ ಕೊನೆಗೊಳ್ಳದು. ಸೇವೆ ಕಾಯಂ ಆಗುವವರೆಗೂ ಹೋರಾಟವನ್ನು ಸ್ಥಗಿತಗೊಳಿಸುವುದಿಲ್ಲ.
ಡಿ.7ರಂದು ಬೆಳಗಾವಿ ಚಲೋ ಹಮ್ಮಿಕೊಂಡಿದ್ದೇವೆ, ಅಂದು ಸರ್ಕಾರ ಲಿಖಿತ ಭರವಸೆ ನೀಡಿದರೆ ಹೋರಾಟ ಸ್ಥಗಿತಗೊಳ್ಳಲಿದೆ, ಇಲ್ಲ ವಾದಲ್ಲಿ ಮಾರನೇ ದಿನದಿಂದಲೇ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ ಎಂದರು. ಈ ವೇಳೆ ಪ್ರತಿಭಟನಾ ನಿರತರು ನಗ ರದ ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು.
ಪೀಟರ್‌ಚಂದ್‌ವಿನೋದ್, ಡಾ.ಕಾಂತರಾಜ್,ವಿ.ಎಸ್.ಮಂಜುನಾಥ್,ಡಾ.ಜಿ.ಎನ್.ಯೋಶಧರ್,ಸುವರ್ಣಮ್ಮ, ಡಾ.ರಂಗಸ್ವಾ ಮಿ, ಡಿ.ಎಂ.ಚಂದನಾ,ನಾಗರತ್ನ, ಭಾಗ್ಯಲಕ್ಷ್ಮೀ, ಸುಕನ್ಯಾ, ಡಾ.ಜಗದೀಶ್‌ಕೆರೆನಳ್ಳಿ,ಶರತ್‌ಬಾಬು, ಮಧು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net