8 ರಂದು ದತ್ತ ಪಲ್ಲಕ್ಕಿ ಮೆರವಣಿಗೆ

Khanapur Anand Ashram Datta Jayanti Poster Release Photo
Published on

ಬೀದರ್: ಭಾಲ್ಕಿ ತಾಲ್ಲೂಕಿನ ಖಾನಾಪುರ ಸಮೀಪದ ಆನಂದ ಆಶ್ರಮದಲ್ಲಿ ದತ್ತ ಜಯಂತಿ ಮಹೋತ್ಸವ ನಿಮಿತ್ತ ಜಗದೀಶ್ವರಿ ಮಾತೆ ಅವರ ಸಾನಿಧ್ಯದಲ್ಲಿ ಡಿ. 8 ರ ವರೆಗೆ ಪೂಜೆ, ರುದ್ರಾಭಿಷೇಕ, ಭಜನೆ, ಕೀರ್ತನೆ, ಸಂಗೀತ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಿತ್ಯ ಸಂಜೆ 7.30 ರಿಂದ ರಾತ್ರಿ 9.30 ರ ವರೆಗೆ ಭಜನೆ, ಕೀರ್ತನೆ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ.
6 ರಂದು ಕಲಾವಿದೆ ಗೀತಾ ಹೆಬ್ಬಳಿಕರ್ ಹಾಗೂ ತಂಡ, 7 ರಂದು ಪುಣೆಯ ಮಂಜುಶಾತಾಯಿ ಪಾಟೀಲ ಮತ್ತು ತಂಡ, ಪಂಡಿತ ರಾಮಲು ಗಾದಗಿ, ಪಂಡಿತ ರಾಜೇಂದ್ರ ಸಿಂಗ್ ಪವಾರ್, ಕೃಷ್ಣ ಮುಖೇಡಕರ್, ಜಗನ್ನಾಥ ನಾನಕೇರಿ ಹಾಗೂ ಬಸವರಾಜ ಶೀಲವಂತ ಅವರು ಸಂಗೀತ ಸುಧೆ ಹರಿಸಲಿದ್ದಾರೆ.
7 ರಂದು ತೊಟ್ಟಿಲು ಕಾರ್ಯಕ್ರಮ ಜರುಗಲಿದೆ. 8 ರಂದು ನಸುಕಿನ ಜಾವ 5ಕ್ಕೆ ಮೈಲಾರ ಮಲ್ಲಣ್ಣ ದೇವಸ್ಥಾನದಿಂದ ಆನಂದ ಆಶ್ರಮದ ವರೆಗೆ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಅಂದು ಜರುಗಲಿರುವ ಕಾರ್ಯಕ್ರಮದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜ, ಡಾ. ಮುರುಘರಾಜೇಂದ್ರ ಸ್ವಾಮೀಜಿ, ಸದ್ರೂಪಾನಂದ ಭಾರತಿ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ.
ಭಿತ್ತಿ ಪತ್ರ ಬಿಡುಗಡೆ: ಆನಂದ ಆಶ್ರಮದಲ್ಲಿ ದತ್ತ ಜಯಂತಿ ಮಹೋತ್ಸವದ ಭಿತ್ತಿ ಪತ್ರ ಬಿಡುಗಡೆ ಮಾಡಲಾಯಿತು.
ಯುವ ಮುಖಂಡ ಪಪ್ಪು ಪಾಟೀಲ ಖಾನಾಪುರ, ವಿನೋದ ಮಲ್ಕಾಪುರೆ, ಪ್ರಶಾಂತ, ಸತೀಶ್ ಸಜ್ಜನ್, ಪಾಂಡುರಂಗ ಮದನೂರ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net