8 ತಿಂಗಳಿಂದ ಕ್ವಾರಿ ಕಾರ್ಮಿಕೆ ನಾಪತ್ತೆ!

Missing-
Published on

ಉಳ್ಳಾಲ: ಮುಡಿಪು ಸಮೀಪದ ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಲಬುರಗಿ ಸಮೀಪದ ಕೊಡಕಲ್ಲು ನಿವಾಸಿ ಮಾದೇವಿ(42) ಎಂಬುವರು 8 ತಿಂಗಳಿನಿಂದ ನಾಪತ್ತೆಯಾಗಿದ್ದು, ಇಂದಿಗೂ ಪತ್ತೆಯಾಗದ ಕಾರಣ ಪ್ರಕರಣ ನಿಗೂಢತೆ ಸೃಷ್ಟಿಸಿದೆ.

ಮಾದೇವಿ ಹಲವು ವರ್ಷಗಳಿಂದ ಮುಡಿಪು ಸಮೀಪದ ಕಪ್ಪು ಕಲ್ಲಿನ ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ವಿಜಯಪುರ ಮೂಲದ ಗುರು ಎಂಬುವರ ಜತೆ 22 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಗೆ ಮೂವರು ಪುತ್ರರಿದ್ದಾರೆ. 8 ತಿಂಗಳ ಹಿಂದೆ ಗುರು ಮತ್ತು ಮಾದೇವಿ ಸಹೋದರನ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದರಿಂದ ಬೇಸತ್ತ ಮಾದೇವಿ ಮಕ್ಕಳನ್ನು ಬಿಟ್ಟು ಮನೆಯಿಂದ ತೆರಳಿದ್ದು, ನಂತರ ಹಿಂದಿರುಗಿಲ್ಲ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಇದಾದ ನಾಲ್ಕು ದಿನಗಳ ಬಳಿಕ ಮಹಿಳೆ ಮುಡಿಪು ಶಾಲೆಗೆ ಬಂದಿದ್ದರು ಎನ್ನಲಾಗಿತ್ತು. ಆದರೆ ಈವರೆಗೂ ಪತ್ತೆಯಾಗಿಲ್ಲ. ಮೂವರು ಮಕ್ಕಳು ಶಾಲೆ, ಕಾಲೇಜಿಗೆ ಹೋಗುತ್ತಿದ್ದು ಗುರು ಅವರೊಂದಿಗಿದ್ದಾರೆ. ಮಾದೇವಿಯವರನ್ನು ಯಾರಾದರೂ ಕಂಡಲ್ಲಿ ಕೊಣಾಜೆ ಠಾಣಾಧಿಕಾರಿ-9480802350 ಇವರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net