

ಕಾರವಾರ: ಹೊನ್ನಾವರ ಕಾಸರಕೋಡಿನ ರೋಷನ್ ಮೊಹಲ್ಲಾದಲ್ಲಿ ಏಪ್ರಿಲ್ 2012 ರಲ್ಲಿ ವೆಂಕಟೇಶ ಬಾಲಕೃಷ್ಣ ಶಾನಬಾಗ ಎಂಬುವವರ ಮನೆ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು 8 ವರ್ಷಗಳ ಬಳಿಕ ಬಂಧಿಸಿದ್ದಾರೆ. ಭಟ್ಕಳ ಮೂಲದ ಹಾಲಿ ಹಾವೇರಿ ತಾಲೂಕು ಹಾನಗಲ್ ಶಿರಗೋಡಿನ ಮಕ್ಬೂಲ್ ಅಹ್ಮದ್ ಸೈಯದ್ ರಸೂಲ್ ಸಾಬ್ ಮುಲ್ಲಾ (45)ಬಂಧಿತ.
ಆತನಿಂದ .60 ಸಾವಿರ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೊನ್ನಾವರ ಸಿಪಿಐ ಶ್ರೀಧರ ಎಸ್.ಆರ್. ನೇತೃತ್ವದಲ್ಲಿ ಪಿಎಸ್ಐ ಸಾವಿತ್ರಿ ನಾಯಕ, ಸಿಬ್ಬಂದಿ ಕೃಷ್ಣ ಗೌಡ, ರಮೇಶ ಲಮಾಣಿ, ಮಹಾವೀರ, ಉದಯ ಮಗದೂರ್, ರಯೀಸ್ ಭಗವಾನ್, ಅನಿಲ ಲಮಾಣಿ ಹಾಗೂ ಜಿಲ್ಲಾ ವೈಜ್ಞಾನಿಕ ನೆರವು ಘಟಕದ ಎ.ಎಸ್.ಐ ರಾಮಚಂದ್ರ ಹೆಗಡೆ, ಸಿ.ಎಚ್.ಸಿ ರಮೇಶ ಬೋರ್ಕರ್ ಇವರನ್ನೊಳಗೊಂಡ ತಂಡವು ಉತ್ತಮ ಕಾರ್ಯ ನಿರ್ವಹಿಸಿರುತ್ತದೆ.