8 ವರ್ಷವಾದರೂ ಸಿಗದ ರೇಷನ್ ಕಾರ್ಡ್

010102
Published on

ತೆಲಸಂಗ: ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದರೆ ಸಾಮಾನ್ಯವಾಗಿ ತಿಂಗಳು ಅಥವಾ ಹದಿನೈದು ದಿನದ ಒಳಗೆ ಕಾರ್ಡ್ ಕೈ ಸೇರುತ್ತದೆ. ಆದರೆ, ಇಲ್ಲೊಬ್ಬರು 8 ವರ್ಷದಿಂದ ಅನೇಕ ಬಾರಿ ಅರ್ಜಿ ಸಲ್ಲಿಸಿದ್ದರೂ ಕಾರ್ಡ್ ಬಂದಿಲ್ಲ.
ಅಥಣಿ ತಾಲೂಕಿನ ತೆಲಸಂಗ ಗ್ರಾಮದ ನಿವಾಸಿ ಅಶೋಕ ಕಟವಾಣಿ ಎಂಬುವರು ಪಡಿತರ ಸೌಲಭ್ಯಕ್ಕಾಗಿ 2012ರಿಂದ ಅರ್ಜಿ ಸಲ್ಲಿಸಿಕೊಂಡು ಬರುತ್ತಿದ್ದಾರೆ. ಆದರೆ, ಪ್ರತಿಬಾರಿ ಅರ್ಜಿ ಸಲ್ಲಿಸಿದಾಗಲೂ ಅನವಶ್ಯಕ ನೆಪ ಹೇಳಿ ಅಧಿಕಾರಿಗಳು ತಮ್ಮ ಅರ್ಜಿಯನ್ನು ವಜಾಗೊಳಿಸುತ್ತಿದ್ದಾರೆ ಎಂದು ಲಾನುಭವಿ ಅಶೋಕ ಕಟವಾಣಿ ಆರೋಪಿಸಿದ್ದಾರೆ.

‘ನಾನು ಗ್ರಾಮದಲ್ಲಿ ಮೂರು ಎಕರೆ ಜಮೀನು ಹೊಂದಿದ್ದೇನೆ. ಫುಟ್‌ಪಾತ್ ಮೇಲೆ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತೇನೆ. ಲಾಕ್‌ಡೌನ್‌ನಿಂದಾಗಿ ಅಂಗಡಿ ಬಂದ್ ಆಗಿದೆ. ಕಾರ್ಡ್ ಇದ್ದಿದ್ದರೆ ಸರ್ಕಾರದಿಂದ ಪಡಿತರವಾದರೂ ಸಿಗುತ್ತಿತ್ತು. ಸದ್ಯ ಆ ಸೌಲಭ್ಯವೂ ಸಿಗುತ್ತಿಲ್ಲ. ಜೀವನ ನಡೆಸುವುದು ಕಷ್ಟವಾಗಿದೆ’ ಎನ್ನುತ್ತಾರೆ ಅಶೋಕ ಕಟವಾಣಿ.

ಅರ್ಜಿ ಸಲ್ಲಿಸಿದ್ದರೆ ಬಳಿಕ ಕಚೇರಿಗೆ ಬರಬೇಕು. ಅವರ ಹಳೇ ಅರ್ಜಿಗಳು ನಮ್ಮ ಬಳಿ ಇಲ್ಲ. 2019 ಹಾಗೂ 2020ರಲ್ಲಿ ಸಲ್ಲಿಸಿದ ಅರ್ಜಿಗಳು ಮಾತ್ರ ನಮ್ಮ ಬಳಿ ಇವೆ. ಆದರೂ ಅಶೋಕ ಅವರಿಗೆ ಕಾರ್ಡ್ ನೀಡುವಲ್ಲಿ ಆಗುತ್ತಿರುವ ಸಮಸ್ಯೆ ಏನೆಂಬ ಕುರಿತು ಪರಿಶೀಲಿಸಲಾಗುವುದು.| ಶರಣಪ್ಪ ಬಾಗೇವಾಡಿ ತಾಲೂಕು ಅಹಾರ ನಿರೀಕ್ಷಕ, ಅಥಣಿ

ಏಜೆಂಟ್ ಮೂಲಕ ಅರ್ಜಿ ಸಲ್ಲಿಸದ ಕಾರಣ, ನಾನು ಗ್ರಾಮದಲ್ಲಿ ಇರುವುದಿಲ್ಲ ಎಂದು ನಮೂದಿಸಿ ಅಧಿಕಾರಿಗಳು ನನಗೆ ಕಾರ್ಡ್ ನೀಡುತ್ತಿಲ್ಲ. ನನ್ನಂತೆ ಗ್ರಾಮದಲ್ಲಿ ಅನೇಕ ಜನರು ಈ ಸಮಸ್ಯೆ ಅನುಭವಿಸುತ್ತಿದ್ದಾರೆ. ಕಾರ್ಡ್‌ಗಾಗಿ 8 ಬಾರಿ ಅರ್ಜಿ ಸಲ್ಲಿಸಿದ್ದು, ಸಂಬಂಧಿತ ದಾಖಲೆಗಳು ನನ್ನ ಬಳಿ ಇವೆ. |ಅಶೋಕ ಕಟವಾಣಿ ತೆಲಸಂಗ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net