8 ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ

8 teams to quarter final stage
Published on

ಮಡಿಕೇರಿ

ಕ್ರೀಡಾ ತವರು ಕೊಡಗಿನಲ್ಲಿ ಕಳೆದ 2 ದಿನಗಳಿಂದ   17ರ ವಯೋಮಾನದ ಬಾಲಕಿಯರ ರಾಷ್ಟ್ರೀಯ
ಹಾಕಿ ಪಂದ್ಯಾವಳಿ ನಡೆಯುತ್ತಿದ್ದು, ಆತಿಥೇಯ ಕರ್ನಾಟಕ ಸೇರಿದಂತೆ 8 ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆದಿವೆ.

ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ, ಕೂಡಿಗೆ ಹಾಗೂ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ. ಪಂದ್ಯಾವಳಿ ಉದ್ದಕ್ಕೂ ಕರ್ನಾಟಕ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು ಕ್ವಾರ್ಟರ್ ಫೈನಲ್ ಹಂತಕ್ಕೆ ಕಾಲಿಟ್ಟಿದೆ. ಈ ಮೂಲಕ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಭಾರಿ ನಿರೀಕ್ಷೆ ಮೂಡಿಸಿದೆ.
ಇದಕ್ಕೂ  ಮೊದಲು ನಡೆದ ಲೀಗ್ ಪಂದ್ಯಾವಳಿಗಳಲ್ಲೂ ಬಲಾಢ್ಯ ತಂಡಗಳು ಮೇಲುಗೈ ಸಾಧಿಸಿದ ಕಾರಣ ಯಾವ ಪಂದ್ಯಗಳಲ್ಲೂ ಸಮಬಲದ ಹೋರಾಟ ಕಂಡುಬರಲಿಲ್ಲ.

ಶುಕ್ರವಾರ ನಡೆದ ಪ್ರೀಕ್ವಾರ್ಟರ್ ಪಂದ್ಯಗಳಲ್ಲಿ  ಮಹಾರಾಷ್ಟ್ರ ವಿರುದ್ಧ ಗೆಲುವು ಸಾಧಿಸಿದ
ಪಂಜಾಬ್, ಚತ್ತೀಗಡ ವಿರುದ್ಧ ಗೆಲುವು ಸಾಧಿಸಿದ ಕರ್ನಾಟಕ, ಹರಿಯಾಣ ವಿರುದ್ಧ ಗೆಲುವು ಸಾಧಿಸಿದ
ಮಣಿಪುರ, ಹಿಮಾಚಲ ಪ್ರದೇಶ ವಿರುದ್ಧ ಗೆಲುವು ಸಾಧಿಸಿದ ಮಧ್ಯಪ್ರದೇಶ, ಉತ್ತರಪ್ರದೇಶ ವಿರುದ್ಧ ಗೆಲುವು ಸಾಧಿಸಿದ ಚಂಡೀಗಡ, ರಾಜಸ್ಥಾನ ವಿರುದ್ಧ ಗೆಲುವು ಸಾಧಿಸಿದ ಕೇರಳ, ಬಿಹಾರ  ವಿರುದ್ಧ ಗೆಲುವು ಸಾಧಿಸಿದ ಜಾರ್ಖಂಡ್ ಹಾಗೂ ದೆಹಲಿ ವಿರುದ್ಧ ಗೆಲುವು ಸಾಧಿಸಿದ ಒಡಿಸ್ಸಾ ರಾಜ್ಯದ ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ಅರ್ಹತೆ ಪಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net