ಶೇರುದಾರರಿಗೆ ಶೇ. 8 ಡಿವಿಡೆಂಡ್

Bhaskar Narvekar Talking in Bank Meeting
Published on

ಅಂಕೋಲಾ: 2022-23ನೇ ಸಾಲಿನ ಮಾರ್ಚ್ ತಿಂಗಳ ಅಂತ್ಯಕ್ಕೆ 62.10 ಲಕ್ಷ ರೂ. ನಿವ್ವಳ ಲಾಭವಾಗಿದ್ದು, ಶೇರುದಾರರಿಗೆ ಶೇ. 8 ಡಿವಿಡೆಂಡ್ ನೀಡಲಿದ್ದೇವೆ ಎಂದು ಅಂಕೋಲಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಭಾಸ್ಕರ ಕೆ. ನಾರ್ವೆಕರ್ ಹೇಳಿದರು.

ಬ್ಯಾಂಕಿನ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ 110ನೇ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.

ಕಟ್ಟಾಬಾಕಿ ಸಾಲದ ವಸೂಲಿಗಾಗಿ ಸಹಕಾರಿ ಸಂಘಗಳ ಕಾಯ್ದೆ 1959ರಡಿಯಲ್ಲಿ ಮಾರಾಟಾಧಿಕಾರಿಗಳ ಮತ್ತು ಸಿವಿಲ್ ಕೋರ್ಟ್ ಮುಖಾಂತರ ಕ್ರಮ ಕೈಕೊಂಡಿರುತ್ತೇವೆ.

ಈ ನಿಟ್ಟಿನಲ್ಲಿ ಸಾಲಗಾರರು ತಮ್ಮ ಸಾಲಗಳನ್ನು ಸಕಾಲದಲ್ಲಿ ಮರುಪಾವತಿಸಿ ಬ್ಯಾಂಕಿನ ಏಳ್ಗೆಗಾಗಿ ಸಹಕರಿಸಬೇಕು. ರಾಷ್ಟ್ರೀಕೃತ ಬ್ಯಾಂಕುಗಳ ಮತ್ತು ಖಾಸಗಿ ಬ್ಯಾಂಕುಗಳ ಸಹಕಾರಿ ಬ್ಯಾಂಕುಗಳಿಗೆ ಪೈಪೋಟಿ ನೀಡುತ್ತಿರುವ ಇಂದಿನ ಸಂದರ್ಭದಲ್ಲಿ ಗ್ರಾಹಕರ ಅನುಕೂಲಕ್ಕೆ ಹೊಸ-ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಕುಮಟಾದಲ್ಲಿ ಶೀಘ್ರವಾಗಿ ಇನ್ನೊಂದು ಶಾಖೆ ತೆರೆಯಲಿದ್ದೇವೆ ಎಂದರು.

ಸಭೆಯಲ್ಲಿ ವಿನೋದ ಬಿ.ನಾಯಕ ಬಾಸಗೋಡ, ಉಮೇಶ ಎನ್.ನಾಯ್ಕ, ಡಿ.ಎನ್.ನಾಯಕ, ಉದಯ ವಿ.ನಾಯಕ ಭಾವಿಕೇರಿ, ನಾರಾಯಣ ನಾಯಕ, ಜಗದೀಶ ಜಿ.ನಾಯಕ ಹೊಸ್ಕೇರಿ, ವಿಜಯ ನಾಯಕ, ಆರ್.ಟಿ.ಮಿರಾಶಿ ಹಲವರು ಸಲಹೆ ಸೂಚನೆ ನೀಡಿದರು.

ಬ್ಯಾಂಕಿನ ಉಪಾಧ್ಯಕ್ಷ ಗೋವಿಂದರಾಯ ನಾಯ್ಕ, ನಿರ್ದೇಶಕರಾದ ಭೈರವ ಡಿ.ನಾಯ್ಕ (ಬಿ.ಡಿ.ನಾಯ್ಕ), ಗೋಪಾಲಕೃಷ್ಣ ನಾಯಕ, ಚಂದ್ರಕಾಂತ ಜಿ.ನಾಯ್ಕ, ಕೃಷ್ಣಾನಂದ ಶೆಟ್ಟಿ, ರಾಜೇಂದ್ರ ಎಸ್.ಶೆಟ್ಟಿ, ಉಮೇಶ ಜಿ. ನಾಯ್ಕ, ನಾಗಾನಂದ ಆಯ್.ಬಂಟ, ಪ್ರಕಾಶ ಆರ್. ಕುಂಜಿ, ಪ್ರಭಾ ಹಬ್ಬು, ಅನುರಾಧ ಎಸ್.ನಾಯ್ಕ, ಗೌರಿ ಸಿದ್ಧಿ, ವೃತ್ತಿಪರ ನಿರ್ದೇಶಕರಾಗಿ ಗುರುನಾಥ ಬಿ.ರಾಯ್ಕರ, ಯೋಗಿತಾ ಕಾಮತ ಉಪಸ್ಥಿತರಿದ್ದರು.

ಪ್ರಧಾನ ವ್ಯವಸ್ಥಾಪಕ ರವೀಂದ್ರ ಪಿ.ವೈದ್ಯ, ವ್ಯವಸ್ಥಾಪಕ ಉದಯ ಶೇಣ್ವಿ, ಸಹಾಯಕ ವ್ಯವಸ್ಥಾಪಕರಾದ ನಾಗರಾಜ ಶೆಟ್ಟಿ, ದೀಪಕ ತಾಳೇಬೈಲಕರ್ ನಿರ್ವಹಿಸಿದರು. ಸಿಬ್ಬಂದಿಗಳಾದ ಮಹಾಬಲೇಶ್ವರ ಬಂಡಿಕಟ್ಟೆ, ಶ್ರೀಧರ ನಾಗರಕಟ್ಟೆ, ನಾಗರಾಜ ಡಿ.ಶೆಟ್ಟಿ, ಜಯಂತ ಜಿ.ನಾಯ್ಕ, ಅರುಣ ಕೇಣಿ, ದಿನಕರ ಗಾಂವಕರ, ದಿನೇಶ ದೇಸಾಯಿ, ರೇಖಾ ಕೇಣಿ, ಉಮೇಶ ನಾಯ್ಕ, ಸಂತೋಷ ನಾಯ್ಕ, ರವಿನಾಥ ಗೌಡ, ನವೀನ ನಾರ್ವೆಕರ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net