ಜುಗಾರಿ ಆಟ ಆಡುತ್ತಿದ್ದ 8 ಮಂದಿ ವಶ

gambling
Published on

ಕೋಟ: ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದ ಕೆರೆಯ ಹತ್ತಿರ ಇರುವ ಮನೆಯ ಬಳಿ ಇಸ್ಪೀಟು ಜುಗಾರಿ ಆಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೋಟ ಪೊಲೀಸರು 8 ಮಂದಿಯನ್ನು ವಶಕ್ಕೆ ಪಡೆದರು.

ಬಂಧಿತ ಆರೋಪಿಗಳನ್ನು ಸ್ಥಳೀಯ ನಿವಾಸಿಗಳಾದ ಸತೀಶ, ರಘು ಸಾಲಿಗ್ರಾಮ, ಚೇತನ ಕಾರ್ಕಡ, ಹರೀಶ, ಜನಾದರ್ನ ಬಾರ್ಕೂರು, ಸನ್ನಿಧಾನ, ಪ್ರಸಾದ ಹಾಗೂ ನವೀನ ಎಂದು ಗುರುತಿಸಲಾಗಿದೆ. ಚಿತ್ರಪಾಡಿ ಗ್ರಾಮದ ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದ ಕೆರೆಯ ಹತ್ತಿರ ಇರುವ ಮನೆಯ ಬಳಿ ಇಸ್ಪೀಟು ಜುಗಾರಿ ಆಟ ಆಡುತ್ತಿರುವ ಕುರಿತು ದೊರೆತ ಖಚಿತ ಮಾಹಿತಿಯ ಮೇರೆಗೆ ಕೋಟ ಠಾಣಾ ಪೊಲೀಸರು ಮಂಗಳವಾರ ತಡರಾತ್ರಿ ದಾಳಿ ನಡೆಸಿ ಇಸ್ಪೀಟು ಆಡುತ್ತಿದ್ದ ಈ 8 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net