ತನಿಖಾ ಸಂಸ್ಥೆಗೆ ಮುಡಾ ನೀಡಬೇಕಾಗಿದ್ದ 8 ಲಕ್ಷ ದಾಖಲೆಗಳು..!

muda scam
Published on

ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ, ಲೋಕಾಯುಕ್ತ ಹಾಗೂ ಜಾರಿ ನಿರ್ದೇಶನಾಲ ಯದಿಂದ ಪ್ರತ್ಯೇಕ ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆಗಳಿಗೆ ಹಗರಣಗಳಿಗೆ ಸಂಬಂಧಿಸಿದ ಕಡತವನ್ನು ತಕ್ಷಣ ನೀಡುವ ಹೊಣೆಗಾರಿಕೆ ಮುಡಾದ ಮೇಲಿದ್ದು, ಇದಕೋಸ್ಕರ ಒಟ್ಟು 8 ಲಕ್ಷ ಜೆರಾಕ್ಸ್ ಪ್ರತಿಗಳ ಅವಶ್ಯಕತೆ ಇದೆ.

ಈ ಜೆರಾಕ್ಸ್ ಪ್ರತಿಗಳನ್ನು ಮುಡಾ ದೃಢೀಕರಿಸಿ ತನಿಖಾಧಿಕಾರಿಗಳಿಗೆ ನೀಡುವ ಅವಶ್ಯಕತೆ ಇದೆ. ಇದಕೋಸ್ಕರ ಮುಡಾ 19 ಲಕ್ಷ ರೂ. ವಿನಿಯೋಗಿಸಿ 9 ಜೆರಾಕ್ಸ್ ಮೆಷಿನ್‌ಗಳನ್ನು ಖರೀದಿ ಮಾಡಿದೆ. ಆದರೆ, ಈ ಮಾಹಿತಿಯನ್ನು ಮುಡಾ ಆಯುಕ್ತ ರಘುನಂದನ್ ಅಲ್ಲಗಳೆದಿದ್ದಾರೆ. ‘ತನಿಖಾ ಸಂಸ್ಥೆಗಳಿಗೆ ಒಟ್ಟಾರೆ 8 ಲಕ್ಷ ಪ್ರತಿಗಳು ನೀಡುವ ಅವಶ್ಯಕತೆ ಇದ್ದು, ನಮ್ಮಲ್ಲಿರುವ ಜೆರಾಕ್ಸ್ ಮೆಷಿನ್‌ಗಳನ್ನು ಬಳಕೆ ಮಾಡಿಕೊಂಡೇ ಜೆರಾಕ್ಸ್ ತೆಗೆಯಲಾಗುತ್ತಿದೆ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net