ಅರಕೇರಾ ತಾಲೂಕಿನ 8 ಗ್ರಾಪಂಗಳು ದೇವದುರ್ಗಕ್ಕೆ ಮರುವರ್ಗವಣೆ ಮಾಡಲಿ

SHARANAGOUDA
SHARANAGOUDA
Published on

ರಾಯಚೂರು ದೇವದುರ್ಗ ತಾಲೂಕಿನ ಗ್ರಾಮ ಪಂಚಾಯಿತಿಗಳನ್ನು ಅವೈಜ್ಞಾನಿಕವಾಗಿಅರಕೇರಾ ತಾಲೂಕಗಳಿಗೆ ಸೇರ್ಪಡೆ ಮಾಡಿದ್ದನ್ನು ಕೈ ಬಿಟ್ಟು ಸರ್ಕಾರ ಕೂಡಲೇ ದೇವದುರ್ಗಕ್ಕೆ ವರ್ಗವಣೆ ಮಾಡದಿದ್ದರೆ ಹೋರಾಟ ಮಾಡಲಾಗುತ್ತದೆಂದು ಸುಂಕೇಶ್ವರಹಾಳ ಗ್ರಾಮಸ್ಥ ಶರಣಗೌಡ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದಿನ ಕ್ಷೇತ್ರದ ಶಾಸಕ ವೈಯಕ್ತಿಕ ಸ್ವಾರ್ಥಕ್ಕೆ ಸರ್ಕಾರದ ಮೇಲೆ ಒತ್ತಡ ಹಾಕಿ ಅರಕೇರಾ ತಾಲೂಕ ಕೇಂದ್ರ ಘೋಷಣೆ ಮಾಡಿಸಿದ್ದರು. ಆದರೆ ತಾಲೂಕಿನ ಮಲದಕಲ್, ರಾಮದುರ್ಗ ಗ್ರಾಮ ಪಂಚಾಯ್ತಿಗಳ ಮಸೀದಿಪುರ, ಸುಂಕೇಶ್ವರ ಹಾಳ, ಗಣೇಕಲ್, ರಾಮದುರ್ಗ ಗ್ರಾಮಸ್ಥರು ಅರಕೇರಾ ತಾಲೂಕ ಕೇಂದ್ರಕ್ಕೆ ಹೋಗಲು 60 ಕೀ.ಮಿ ದೂರವಾಗುತ್ತದೆ.

ಆದರೆ ದೇವದುರ್ಗಕ್ಕೆ ಕೇವಲ 25 ಕಿಮಿ ಅಂತರದಲ್ಲಿ ದೇವದುರ್ಗ ತಾಲೂಕ ಕೇಂದ್ರವಿದೆ. ರೈತರು ಪಹಣಿ, ರಸಗೊಬ್ಬರ, ವಿದ್ಯಾರ್ಥಿಗಳು ಜಾತಿ ಪ್ರಮಾಣ ಪತ್ರ ಪಡೆಯಲು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಅರಕೇರಾ ತಾಲೂಕ ಕೇಂದ್ರದಲ್ಲಿ ಪಹಣಿ ಸಹಿತ ಸಿಗುತ್ತಿಲ್ಲ. ಈಗಾಗಲೇ ರಾಮದುರ್ಗ, ಮಲದಕಲ್, ಕೊತ್ತದೊಡ್ಡಿ, ಮುಂಡರಗಿ, ಪಲಕನಮರಡಿ, ಗಾಣಧಾಳ, ಹೊಸೂರು ಸಿದ್ದಾಪುರ, ಸೋಮನಮರಡಿ ಪಂಚಾಯಿತಿಗಳು ಠರಾವ್ ಮಾಡಿ ದೇವದುರ್ಗ ತಾಲೂಕ ಕೇಂದ್ರದಲ್ಲಿಯೆ ಮುಂದುವರೆಯಲು ನಿರ್ಧರಿಸಿವೆ.

ಜಿಲ್ಲಾಧಿಕಾರಿಗಳಿಗೂ ಮನವಿ ನೀಡಿ ಜನರಿಗೆ ಆಗುತ್ತಿರುವ ಸಮಸ್ಯೆ ಮನವರಿಕೆ ಮಾಡಲಾಗಿದೆ. ಕೂಡಲೇ 8 ಗ್ರಾಮ ಪಂಚಾಯಿತಿಗಳನ್ನು ದೇವದುರ್ಗಕ್ಕೆ ಮರು ಸೇರ್ಪಡೆ ಮಾಡದೇ ಹೊದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ನಡೆಸುವದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಿದ್ದನಗೌಡ ಮೂಡಲಗುಂಡಾ, ಅಮರೇಗೌಡ ಕಮಲದಿನ್ನಿ, ಶರಣಗೌಡ, ಶಿವರಾಜ ಮುಂಡರಗಿ, ರಂಗಣ್ಣ ಕೋಲ್ಕಾರ, ಗೋವಿಂದರಾಜ ಕೊತ್ತದೊಡ್ಡಿ, ಸಾಬಣ್ಣ ಕಮಲದಿನ್ನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net